Sunday, July 7, 2024
Homeಟೆಕ್/ ಆಟೋ ಲೋಕTech Tips: ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡೋದು ಹೇಗೆ ಗೊತ್ತಾ?;ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

Tech Tips: ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಶೆಡ್ಯೂಲ್ ಮಾಡೋದು ಹೇಗೆ ಗೊತ್ತಾ?;ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

ಜಗತ್ತಿನ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿರುವ ವಾಟ್ಸಾಪ್ ಆಗಾಗ್ಗೆ ತನ್ನ ಬಳಕೆದಾರರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಅಂತಹದೇ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿರುವ ವಾಟ್ಸಾಪ್ ತನ್ನ ಬಳಕೆದಾರರಿಗೆ ಮೆಸೇಜ್ ಅನ್ನು ಶೆಡ್ಯೂಲ್ ಮಾಡುವ ಅವಕಾಶವನ್ನು ನೀಡಿದೆ.

ಹೌದು, ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ವಾಟ್ಸಾಪ್‌ನಲ್ಲಿ ನಿಗದಿತ ಸಮಯದಲ್ಲಿ ಸಂದೇಶಗಳನ್ನು ಕಳುಹಿಸಲು ಈ ಹೊಸ  ಶೆಡ್ಯೂಲ್  ವೈಶಿಷ್ಟ್ಯವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ನೀವು ವಾಟ್ಸಾಪ್‌ನ ಈ ವೈಶಿಷ್ಟ್ಯದ ಸಹಾಯದಿಂದ ಯಾವುದೇ ವಿಶೇಷ ಸಂದರ್ಭಗಳಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಮರೆಯದೆ ಸಂದೇಶವನ್ನು ರವಾನಿಸಬಹುದಾಗಿದೆ.

ನೀವು ಯಾರಿಗಾದರೂ ವಾಟ್ಸಾಪ್ ಸಂದೇಶವನ್ನು ಶೆಡ್ಯೂಲ್ ಮಾಡಲು ಬಯಸಿದರೆ ಇದಕ್ಕಾಗಿ ಹಲವಾರು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳು ಲಭ್ಯವಿವೆ, ಇದರಲ್ಲಿ ಶೆಡ್ಯೂಲರ್, ಡು ಇಟ್ ಲೇಟರ್ ಮತ್ತು ಸ್ಕೆಡಿಟ್‌ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಸೇರಿವೆ.

ವಾಟ್ಸಾಪ್‌ನಲ್ಲೂ ಸಂದೇಶಗಳನ್ನು ಶೆಡ್ಯೂಲ್ ಮಾಡುವುದು ಹೇಗೆ? 

*ನೀವು ಸಂದೇಶವನ್ನು ಶೆಡ್ಯೂಲ್ ಮಾಡಲು ಬಯಸಿದರೆ ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್/ ಆಪ್ ಸ್ಟೋರ್‌ನಿಂದ SKEDit ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ನಂತರ ಫೇಸ್ಬುಕ್ ಖಾತೆಯೊಂದಿಗೆ ಸೈನ್ ಇನ್ ಮಾಡಿ.

* ಬಳಿಕ ನಿಮ್ಮ ಹೆಸರು, ಇಮೇಲ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ನೀವು ಖಾತೆಯನ್ನು ರಚಿಸಬೇಕಾಗುತ್ತದೆ.

* ಇದರ ನಂತರ, ನಿಮ್ಮ ಇಮೇಲ್‌ನಲ್ಲಿ ಪರಿಶೀಲನೆ ಇಮೇಲ್ ಬರುತ್ತದೆ.


* ಅದನ್ನು ಪರಿಶೀಲಿಸಿದ ನಂತರ ನೀವು ಮೆಸೇಜ್ ಶೆಡ್ಯೂಲ್ ಮಾಡಲು ಬಯಸುವ ಜನರನ್ನು ಆಯ್ಕೆ ಮಾಡಿ.

* ನೀವು ಈಗ ಈ ಸಂಪರ್ಕಗಳಿಗೆ ಯಾವಾಗ ಬೇಕಾದರೂ ಸಂದೇಶ ಕಳುಹಿಸಬಹುದು.
ಈ ರೀತಿಯಾಗಿ ನೀವು ನಿಮ್ಮ ಪ್ರೀತಿಪಾತ್ರರಿಗೆ ತಪ್ಪದೆ ಸಂದೇಶ ರವಾನಿಸಬಹುದಾಗಿದೆ.

ಹೆಚ್ಚಿನ ಸುದ್ದಿ