Sunday, July 7, 2024
Homeಲೈಫ್ ಸ್ಟೈಲ್Evening Snacks: ಆಹಾ ಈ ರೀತಿ ಹಲಸಿನ ಕಾಯಿ ಪೋಡಿ(ಬಜ್ಜಿ) ಮಾಡಿದ್ರೆ ಏನ್ ರುಚಿ...

Evening Snacks: ಆಹಾ ಈ ರೀತಿ ಹಲಸಿನ ಕಾಯಿ ಪೋಡಿ(ಬಜ್ಜಿ) ಮಾಡಿದ್ರೆ ಏನ್ ರುಚಿ ಗೊತ್ತಾ!

ಹಲಸಿನಕಾಯಿ ಸಮಯದಲ್ಲಿ ಅದರಿಂದ ತರಾವರಿ ಖಾದ್ಯ ಮಾಡಿ ಸವಿಯಬಹುದು. ಹಲಸಿನ ತೊಳೆ ಆಗುವ ಮುಂಚೆ ಕಿತ್ತು ಅದರಿಂದ ಬಜ್ಜಿ, ಗೊಜ್ಜು, ಸಾರು ಅಂತ ಮಾಡಿ ಸವಿಯಬಹುದು. ಬಲಿತಿರದ ಹಲಸಿನಕಾಯಿಯನ್ನು ಗುಜ್ಜೆ ಎನ್ನುತ್ತಾರೆ. ಗುಜ್ಜೆಯಿಂದ ಸಾರು ಮಾಡಿದರೆ ಬಾಯಿ ಚಪ್ಪರಿಸಿಕೊಂಡು ಸವಿಯಬಹುದು, ಇನ್ನು ಪಲ್ಯ ಮಾಡಿದರೆ ರುಚಿಯಾಗಿರುತ್ತದೆ, ಇನ್ನು ಸ್ನ್ಯಾಕ್ಸ್ ಮಾಡಲಂತೂ ಸೂಪರ್.

ಗುಜ್ಜೆಯ ಸ್ನ್ಯಾಕ್ಸ್ ಸುಲಭವಾಗಿ ಮಾಡಬಹುದು, ಮನೆ ಮಂದಿಗೆಲ್ಲಾ ಇಷ್ಟವಾಗುವುದರಲ್ಲಿ ನೋ ಡೌಟ್‌. ಹಲಸಿನಕಾಯಿಯಿಂದ ಮಾಡು ವ ಸ್ನ್ಯಾಕ್ಸ್ ಅನ್ನು ಬೆಂಗಳೂರು ಕಡೆ ಹಲಸಿನಕಾಯಿ ಬಜ್ಜಿ ಅಂದ್ರೆ, ಮಂಗಳೂರು ಕಡೆ ಹಲಸಿನಕಾಯಿ ಪೋಡಿ ಅಂತಾರೆ. ಇದನ್ನು ಮಾಡುವ ವಿಧಾನವನ್ನು ಸ್ಟೆಪ್‌ ಬೈ ಸ್ಟೆಪ್ ಹೇಳಲಾಗಿದೆ ನೋಡಿ

ಬೇಕಾಗುವ ಸಾಮಗ್ರಿ

  • ಗುಜ್ಜೆ ಅಥವಾ ಬಲಿತಿರದ ಹಲಸಿನಕಾಯಿ 1
  • ಅರ್ಧ ಕಪ್ ಕಡಲೆ ಹಿಟ್ಟು
  • 1 ಚಮಚ ಖಾರದ ಪುಡಿ
  • 1/4 ಚಮಚ ಗರಂ ಮಸಾಲೆ ಪುಡಿ
  • 1/4 ಚಮಚ ಜೀರಿಗೆ ಪುಡಿ
  • ರುಚಿಗೆ ತಕ್ಕ ಉಪ್ಪು
  • ಸ್ವಲ್ಪ ನೀರು ಎಣ್ಣೆ

ಮಾಡುವ ವಿಧಾನ

* ಬಲಿತಿರದ ಹಲಸಿನಕಾಯಿ ತೆಗೆದು ಅದರ ಸಿಪ್ಪೆ ಸುಲಿಯಬೇಕು (ಗುಜ್ಜೆ ಮಾಡಲು ಹದವಾದ ಹಲಸಿನಕಾಯಿ)

* ನಂತರ ಚಿಕ್ಕದಾಗಿ , ತೆಳುವಾಗಿ ಕತ್ತರಿಸಿ

* ಒಂದು ಬೌಲ್‌ನಲ್ಲಿ ಅರ್ಧ ಕಪ್ ಕಡ್ಲೆ ಹಿಟ್ಟು, 1 ಚಮಚ ಖಾರದ ಪುಡಿ, 1/4 ಚಮಚ ಗರಂ ಪುಡಿ, 1/4 ಚಮಚ ಜೀರಿಗೆ ಪುಡಿ, ಸ್ವಲ್ಪ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿ.

* ಅದಕ್ಕೆ ಕತ್ತರಿಸಿದ ಹಲಸಿನಕಾಯಿ ಹಾಕಿ ಮಿಕ್ಸ್ ಮಾಡಿ.

* ದಪ್ಪ ತಳವಿರುವ ಪಾತ್ರೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದಾಗ ಮಿಕ್ಸ್ ಮಾಡಿಟ್ಟ ಹಲಸಿನಕಾಯಿ ಹಾಕಿಮ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಎಣ್ಣೆಯಿಂದ ತೆಗೆದು ತಟ್ಟೆ ಅಥವಾ ಬೌಲ್‌ಗೆ ಹಾಕಿ.

* ಬಿಸಿ- ಬಿಸಿಯಾದ ಹಲಸಿನಕಾಯಿ ಬಜ್ಜಿ ಅಥವಾ ಹಲಸಿನಕಾಯಿ ಪೋಡಿ ಸವಿಯಲು ರೆಡಿ.

ಹೆಚ್ಚಿನ ಸುದ್ದಿ