Sunday, July 7, 2024
Homeಲೈಫ್ ಸ್ಟೈಲ್Jack fruit Recipe: ಘಮಘಮಿಸೋ, ಬಾಯಲ್ಲಿ ನೀರೂರಿಸೋ ಹಲಸಿನ ಸಾಂಬಾರ್ (ಗುಜ್ಜೆ) ರುಚಿ ನೋಡಿದ್ದೀರಾ?

Jack fruit Recipe: ಘಮಘಮಿಸೋ, ಬಾಯಲ್ಲಿ ನೀರೂರಿಸೋ ಹಲಸಿನ ಸಾಂಬಾರ್ (ಗುಜ್ಜೆ) ರುಚಿ ನೋಡಿದ್ದೀರಾ?

ಹಲಸಿನಕಾಯಿ ಸಾರು ಬೆಂಗಳೂರಿಗಿಂತ ಮಲೆನಾಡು, ಕೊಡಗು, ಮಂಗಳೂರು ಕಡೆ ತುಂಬಾ ಫೇಮಸ್. ಈ ಸಾರನ್ನು ಕೊಡಗಿನಲ್ಲಿ ನಾವು ಗುಜ್ಜೆ ಸಾರು ಎಂದು ಕರೆಯುತ್ತೇವೆ. ಮಿಡಿ ಹಲಸಿನಕಾಯಿಯಿಂದ ಸಾರು, ಪಲ್ಯ, ಪೋಡಿ ಅಂತ ನಾನಾ ಖಾದ್ಯಗಳನ್ನು ತಯಾರಿಸುತ್ತೇವೆ.

ಹಲಸಿನಕಾಯಿಂದ ಮಾಡಿದ ಖಾದ್ಯಗಳ ರುಚಿ ನೋಡಿದವರು ಹಲಸಿನಕಾಯಿ ಸೀಸನ್ ಮುಗಿದ ಮೇಲೆ, ಹಲಸಿನ ಮರ ನೋಡಿ ಇದರಲ್ಲಿ ಬೇಗ ಕಾಯಿ ಬಿಡಬಾರದೇ ಎಂದು ಯೋಚಿಸುವುದಂತು ದಿಟ.

ಇಲ್ಲಿ ನಾನು ಗುಜ್ಜೆ ಸಾರು ಮಾಡುವ ವಿಧಾನ ಹೇಳಿದ್ದೇನೆ ನೋಡಿ.

ಬೇಕಾಗುವ ಪದಾರ್ಥಗಳು

  • ಬಲಿತಿರದ ಹಲಸಿನಕಾಯಿ( ನಾವುಗುಜ್ಜೆ ಅಂತೀವಿ) 1
  • ಅಲಸಂದೆ ಅಥವಾ ಕಡಲೆ 1/4 ಕಪ್
  • ಈರುಳ್ಳಿ 2
  • ಬೆಳ್ಳುಳ್ಳಿ ಎಸಳು 8-10
  • ಹಸಿ ಮೆಣಸಿನಕಾಯಿ 2
  • ಅರಿಶಿಣ ಪುಡಿ ಅರ್ಧ ಚಮಚ
  • ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
  • ಕೊತ್ತಂಬರಿ ಪುಡಿ 1 ಚಮಚ ಗರಂ
  • ಮಸಾಲ ಅರ್ಧ ಚಮಚ
  • ಜೀರಿಗೆ 1 ಚಮಚ
  • ತೆಂಗಿನ ತುರಿ 1 ಕಪ್
  • ಸಾಸಿವೆ ಸ್ವಲ್ಪ
  • ಹುಣಸೆ ರಸ
  • ಕರಿ ಬೇವಿನ
  • ಎಲೆ ರುಚಿಗೆ ತಕ್ಕ ಉಪ್ಪು
  • ಎಣ್ಣೆ
  • ನೀರು

ತಯಾರಿಸುವ ವಿಧಾನ

* ಹಲಸಿನ ಕಾಯಿ ಸಿಪ್ಪೆ ಸುಲಿದು ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ, ತೊಳೆದು ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಜೊತೆಗೆ ಬೇಯಿಸಿ. ಪ್ರೆಷರ್ ಕುಕ್ಕರ್ ನಲ್ಲಿ ಮಾಡುವುದಾದರೆ 3 ವಿಶಲ್ ಬರುವವರೆಗೆ ಬೇಯಿಸಿ. ನಂತರ ನೀರು ಬಸಿದು ಹಲಸಿನಕಾಯಿಯನ್ನು ಒಂದು ಪಾತ್ರೆಗೆ ಹಾಕಿ.

* ನಂತರ ಅಲಸಂದೆಯನ್ನು 2 ವಿಶಲ್ ಬರುವವರೆಗೆ ಬೇಯಿಸಿ ಇಡಿ. * ತೆಂಗಿನ ತುರಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಜೀರಿಗೆ, ಗರಂ ಮಸಾಲ, ಬೆಳ್ಳುಳ್ಳಿ ಹಾಕಿ ಮತ್ತೆ 5 ನಿಮಿಷ ಹುರಿದು, ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣನೆ ರುಬ್ಬಿ.

* ಈಗ ಪಾತ್ರೆಯನ್ನು ಬಿಸಿ ಮಾಡಿ, ಅದಕ್ಕೆ 1 -2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾಗುವಾಗ ಸಾಸಿವೆ ಹಾಕಿ , ಸಾಸಿವೆ ಚಟಾಪಟ ಶಬ್ದ ಮಾಡುವಾಗ ಈರುಳ್ಳಿ, ಹಸಿ ಮೆಣಸು ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ಈಗ ರುಬ್ಬಿದ ಮಸಾಲೆ ಹಾಕಿ, ಅದಕ್ಕೆ ಬೇಯಿಸಿ ಹಲಸಿನಕಾಯಿ ಮತ್ತು ಅಲಸಂದೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ , ಹುಣಸೆ ಹಣ್ಣಿನ ರಸ ಹಾಕಿ, 5-7 ನಿಮಿಷ ಕುದಿಸಿ, ಉರಿಯಿಂದ ಇಳಿಸಿದರೆ ಸವಿರುಚಿಯ ಹಲಸಿನಕಾಯಿ ಸಾರು(ಗುಜ್ಜೆ) ಸಾರು ರೆಡಿ.

ಹೆಚ್ಚಿನ ಸುದ್ದಿ