Sunday, July 7, 2024
Homeಲೈಫ್ ಸ್ಟೈಲ್Halasinakayi Palya; ಹಲಸಿನ ರುಚಿ ಬಲ್ಲವರು ಈ ರೆಸಿಪಿ ಇಷ್ಟಪಡೋದ್ರಲ್ಲಿ ಡೌಟಿಲ್ಲ

Halasinakayi Palya; ಹಲಸಿನ ರುಚಿ ಬಲ್ಲವರು ಈ ರೆಸಿಪಿ ಇಷ್ಟಪಡೋದ್ರಲ್ಲಿ ಡೌಟಿಲ್ಲ

ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಈಗಂತೂ ಹಲಸಿನ ಸೀಸನ್ ಬೇರೆ. ಹಲಸಿನ ಹಣ್ಣು ತಿನ್ನೋದಕ್ಕೆ ರುಚಿಯಾಗಿರುವ ಜೊತೆಗೆ ಅನೇಕ ಪೋಷಕಾಂಶಗಳ ಆಗರವಾಗಿದೆ. ವಿಟಮಿನ್ ಎ, ಸಿ ಮತ್ತು ಬಿ ಕಾಂಪ್ಲೆಕ್ಸ್ ಹೇರಳವಾಗಿವೆ. ಜೊತೆಗೆ ಪೊಟ್ಯಾಸಿಯಂ, ಮೆಗ್ನೇಷಿಯಂ, ಮ್ಯಾಂಗನೀಸ್ ಹಾಗೂ ಕಬ್ಬಿಣಾಂಶ ಕೂಡ ಇದೆ. ಹಲಸಿನ ಹಣ್ಣಿನಿಂದ ಅನೇಕ ಖಾದ್ಯಗಳನ್ನು ಕೂಡ ತಯಾರಿಸಬಹುದು. ಈಗಂತೂ ಹಲಸಿನಕಾಯಿ ಕಾಲ. ಎಲ್ಲೆಡೆ ಘಮ ಘಮ ಅಂತ ಹಲಸು ಸುವಾಸನೆ ಬೀರುತ್ತದೆ. ಇದೇ ವೇಳೆ ಅದು ಹಣ್ಣಾಗುವವರೆಗೂ ಕಾಯುತ್ತಾ ಕೂರುವುದು ಬೇಡವೆ ಬೇಡ. ಹಲಸಿನ ಹಣ್ಣು ಮಾತ್ರವಲ್ಲ ಅದರ ಕಾಯಿ ಕೂಡ ಅಡುಗೆಗೆ ಬಳಸಲಾಗುತ್ತದೆ. ಆರೋಗ್ಯಕ್ಕೆ ಉತ್ತಮವಾಗಿರುವ ಈ ಹಣ್ಣಿನ ಪಲ್ಯ ನಾಲಿಗೆಗೂ ರುಚಿಕರ.

ಮಾಡಲು ಬೇಕಾದ ಪದಾರ್ಥಗಳು
* ಹಲಸಿನ 1/2 ಭಾಗ
* 1 ಟೀಸ್ಪೂನ್ ಉದ್ದಿನ ಬೇಳೆ
* 1 ಟೀಸ್ಪೂನ್ ಗ್ರಾಂ ಬೇಳೆ ಅಥವಾ ಕಡಲೆ ಬೇಳೆ
* 4 ರಿಂದ6 ಚಮಚ ಅಡುಗೆ ಎಣ್ಣೆ
* 1/2 ಚಮಚ ಸಾಸಿವೆ
* ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
* ಒಂದು ದೊಡ್ಡ ಚಿಟಿಕೆ ಇಂಗು
* 4 ರಿಂದ 5 ಕರಿಬೇವಿನ ಎಲೆಗಳು
* 1 ನೆಲ್ಲಿಕಾಯಿ ಗಾತ್ರದ ಬೆಲ್ಲ
* 1 ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು
* ನಿಮ್ಮ ರುಚಿಗೆ ತಕ್ಕಂತೆ ಉಪ್ಪು

ಪಲ್ಯಕ್ಕೆ ರುಬ್ಬಲು ಬೇಕಾಗುವ ಸಾಮಾಗ್ರಿಗಳು
* 1/2 ಚಮಚ ಸಾಸಿವೆ ಕಾಳು
* 3 ಕೆಂಪು ಮೆಣಸಿನಕಾಯಿಗಳು
* 1/2 ಕಪ್ ತುರಿದ ತೆಂಗಿನಕಾಯಿ
* 1 ಟೀಸ್ಪೂನ್ ಕೊತ್ತಂಬರಿ ಬೀಜಗಳು

ಮಾಡುವ ವಿಧಾನ
* ಹಲಸಿನ ಕಾಯಿಯನ್ನು ಮಧ್ಯಕ್ಕೆ ಕತ್ತರಿಸಿ, ಒಳಭಾಗವನ್ನು ತೆಗೆದುಹಾಕಿ, ಬಳಸಲು ಬೇಕಾಗಿರುವ ಕಾಯಿಗಳನ್ನು ಆರಿಸಿಕೊಳ್ಳಿ. ಅವುಗಳನ್ನು ನೀರಿನಲ್ಲಿ ಹಾಕಿ.
* ಪ್ರೆಶರ್ ಕುಕ್ಕರ್‌ನಲ್ಲಿ ಕತ್ತರಿಸಿದ ಹಸಿ ಹಲಸಿನ ಕಾಯಿಗಳನ್ನು ಹಾಕಿಕೊಳ್ಳಿ. ಜೊತೆಗೆ ಒಂದು ಚಮಚ ಉಪ್ಪು ಮತ್ತು ಒಂದು ಚಿಟಿಕೆ ಅರಿಶಿನ ಸೇರಿಸಿ.
*ಅಗತ್ಯವಿರುವ ನೀರನ್ನು ಸೇರಿಸಿ ಮತ್ತು ಮೃದುವಾಗುವವರೆಗೆ ಬೇಯಿಸಿ. ಬೇಯಿಸಿದ ನಂತರ, ನೀರನ್ನು ತೆಗೆದು, ಅದನ್ನು ಲೈಟ್ ಆಗಿ ಮ್ಯಾಶ್ ಮಾಡಿ.
* ಈಗ ಮಸಾಲೆಗೆ ತುರಿದ ತೆಂಗಿನಕಾಯಿ, ಕೆಂಪು ಮೆಣಸಿನಕಾಯಿ, ಸಾಸಿವೆ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸರ್ ಗ್ರೈಂಡರ್ ಬಳಸಿ ನೀರು ಸೇರಿಸದೆ ರುಬ್ಬಿಕೊಳ್ಳಿ.


* ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಬೇಳೆ, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಬಳಸಿ ಒಗ್ಗರಣೆ ಮಾಡಿಕೊಳ್ಳಿ.
* ಇಂಗು ಮತ್ತು ಅರಿಶಿನ ಪುಡಿಯನ್ನು ಸೇರಿಸಿ. ನಂತರ ಬೇಯಿಸಿದ ಮತ್ತು ಹಿಸುಕಿದ ಹಲಸಿನ ಕಾಯಿಯನ್ನು ಸೇರಿಸಿ.
* ನಿಮ್ಮ ರುಚಿಗೆ ತಕ್ಕಂತೆ ಉಪ್ಪು, ಬೆಲ್ಲ ಮತ್ತು ಹುಣಸೆಹಣ್ಣು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ತರಿ ತರಿ ಇದೆ ಎನಿಸಿದರೆ, ಸ್ವಲ್ಪ ನೀರು ಸೇರಿಸಿ. ರುಬ್ಬಿದ ಮಸಾಲೆ ಸೇರಿಸಿ. ಸ್ವಲ್ಪ ಹೊತ್ತು ಕಲಕಿ ಸ್ಟವ್ ಆಫ್ ಮಾಡಿ. ಇದನ್ನು ಬಿಸಿ ಬಿಸಿ ಅನ್ನ ಅಥವಾ ಚಪಾತಿ, ದೋಸೆಯೊಂದಿಗೆ ಬಡಿಸಿ.

ಹೆಚ್ಚಿನ ಸುದ್ದಿ