Sunday, July 7, 2024
Homeಲೈಫ್ ಸ್ಟೈಲ್Snack Recipe: ಮಳೆಗಾಲದ ಸಂಜೆಗೆ ಹೆಲ್ದಿ ಹಲಸಿನ ಕಾಯಿ ಸೂಪ್; ಇಲ್ಲಿದೆ ಮಾಡುವ ವಿಧಾನ

Snack Recipe: ಮಳೆಗಾಲದ ಸಂಜೆಗೆ ಹೆಲ್ದಿ ಹಲಸಿನ ಕಾಯಿ ಸೂಪ್; ಇಲ್ಲಿದೆ ಮಾಡುವ ವಿಧಾನ

ಹೇಳಿ ಕೇಳಿ ಇದು ಮಳೆಗಾಲ, ಹೊರಗೆ ಮಳೆ, ತಂಪಿನ ವಾತಾವರಣ ಬೇರೆ ಈ ಸಮಯದಲ್ಲಿ ದೇಹ ಬೆಚ್ಚಗಿನ ತಿನಿಸುಗಳು, ಪಾನೀಯಗಳನ್ನು ಕೇಳುತ್ತದೆ. ಈ ಸಮಯದಲ್ಲಿ ಬಾಯಿಗೆ ರುಚಿಕರ ಹಾಗೂ ಆರೋಗ್ಯವಾಗಿರುವ ತಿಂಡಿ, ತಿನಿಸುಗಳನ್ನು ಸೇವಿಸಬೇಕಾಗುತ್ತದೆ. ಏಕೆಂದರೆ ಮಳೆಗಾಲದಲ್ಲಿ ಅನಾರೋಗ್ಯಕ್ಕೆ ನಾವು ಬೇಗನೇ ತುತ್ತಾಗುತ್ತೇವೆ. ಹಾಗಾಗಿ ಆರೋಗ್ಯಕರವಾದ ಆಹಾರಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಹಾಗಾಗಿ ಇಂದು ನಾವು ನಿಮಗೆ ರುಚಿಯೂ ಆದ, ಆರೋಗ್ಯಕ್ಕೂ ಒಳ್ಳೆಯದಾದ ಹಲಸಿನ ಕಾಯಿ ಸೂಪ್ ರೆಸಿಪಿಯನ್ನು ತಿಳಿಸಲಿದ್ದೇವೆ. ಸೂಪ್ ಕುಡಿಯುವ ಆಸೆಯಿದ್ದವರೂ ಈ ಆರೋಗ್ಯಕ ಸೂಪ್ ಅನ್ನು ಮಾಡಿ ಸೇವಿಸಬಹುದಾಗಿದ್ದು, ಮಳೆಗಾಲದ ಸಂಜೆಗೆ ಇದೊಂದು ಹೆಲ್ದಿ ಸ್ನಾಕ್ಸ್.

ಬೇಕಾಗುವ ಸಾಮಾಗ್ರಿಗಳು

ಆವಶ್ಯಕ ಸಾಮಗ್ರಿಗಳು:

  • ಹಲಸಿನಕಾಯಿ ತೊಳೆಗಳು- ಬೇಯಿಸಿರಬೇಕು
  • ತೆಂಗಿನ ಕಾಯಿ ತುರಿ
  • ಹಸಿಮೆಣಸು 2-3 (ರುಚಿಗೆ ತಕ್ಕಂತೆ)
  • ಉಪ್ಪು ರುಚಿಗೆ ತಕ್ಕಂತೆ
  • ಜೀರಿಗೆ:‘ 1 ಟೀಸ್ಪೂನ್
  • ಇಂಗು (ಹಿಂಗು) ಒಂದು ಚಿಟಿಕೆ
  • ತೆಂಗಿನ ಎಣ್ಣೆ 1 ಟೇಬಲ್ ಸ್ಪೂನ್

ತಯಾರಿಸುವ ವಿಧಾನ:

ಹಲಸಿನಕಾಯಿ ಕತ್ತರಿಸಿ, ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ. ನಂತರ ಅದನ್ನು ಕುಕ್ಕರ್​ಗೆ ಹಾಕಿ ಒಂದು ಸೀಟಿ ಕೂಗಿಸಿಕೊಳ್ಳಿ.  ಮಿಕ್ಸರ್ ಜಾರಿನಲ್ಲಿ ಬೇಯಿಸಿದ ಹಲಸಿನಕಾಯಿ, ತೆಂಗಿನ ತುರಿ ಸ್ವಲ್ಪ, ಹಸಿಮೆಣಸು, ಜೀರಿಗೆ, ಇಂಗು, ಸೇರಿಸಿಕೊಂಡು ರುಬ್ಬಿಕೊಳ್ಳಿ.  ನೀರು ಸೇರಿಸಿ, ಮೃದುಗೊಳ್ಳುವವರೆಗೂ ರುಬ್ಬಿಕೊಳ್ಳಿ.

ಒಂದು ಚಿಕ್ಕ ತವಾದಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಉದ್ದಿನಬೇಳೆ, ಸಾಸಿವೆ, ಕರಿಬೇವು ಎಲೆ ಹಾಕಿ ಬಿಸಿಮಾಡಿ ಒಗ್ಗರಣೆ ರೀತಿ ಮಾಡಿಕೊಳ್ಳಿ ಅದಕ್ಕೆ ಈ ಬೀಸಿದ ಮಿಶ್ರಣವನ್ನು ಸೇರಿಸಿಕೊಳ್ಳಿ. ಗಾರ್ನಿಶ್​ ಮಾಡಲು ಕೊತ್ತಂಬರಿ ಎಲೆಗಳನ್ನು ಬಳಸಿ. ಬಿಸಿ ಬಿಸಿಯಾಗಿರುವಾಗಲೇ ಇದನ್ನು ಸವಿಯಿರಿ.

ಹೆಚ್ಚಿನ ಸುದ್ದಿ