Sunday, July 7, 2024
Homeಲೈಫ್ ಸ್ಟೈಲ್Morning Breakfast: ಕರಾವಳಿ ಸ್ಪೆಷಲ್ ಹಲಸಿನ ಹಣ್ಣಿನ ದೋಸೆ; ಇಲ್ಲಿದೆ ರೆಸಿಪಿ

Morning Breakfast: ಕರಾವಳಿ ಸ್ಪೆಷಲ್ ಹಲಸಿನ ಹಣ್ಣಿನ ದೋಸೆ; ಇಲ್ಲಿದೆ ರೆಸಿಪಿ

ರವಾ ಇಡ್ಲಿ, ಅಕ್ಕಿ ಇಡ್ಲಿ ಕೇಳಿದ್ದೀವಿ, ತಿಂದಿದ್ದೀವಿ. ದೋಸೆನೂ ಅಷ್ಟೇ, ಸಖತ್‌ ಆಗಿ ಸವಿದಿದ್ದೀವಿ. ಆದ್ರೆ , ರವಾ ಅಲ್ದೇ ಹಲಸಿನ ಹಣ್ಣಿಂದಲೂ ಮಾಡೋ ಈ ದೋಸೆ ಟೇಸ್ಟಿ ಸವಿಬೇಕು. ವಾವ್! ಆ ಟೇಸ್ಟಿ ಅಂತೂ ಈ ಮಳೆಗಾಲಕ್ಕೆ ಖಂಡಿತಾ ಬಾಯಿ ಚಪ್ಪರಿಸುವಂತೆ ಮಾಡುತ್ತೆ.

ಸಾಮಾನ್ಯವಾಗಿ ಹಲಸಿನ ಹಣ್ಣಿನಿಂದ ಕಡುಬು, ಮುಳಕ,ಶೀರಾ, ಪಾಯಸ, ದೋಸೆ, ಇಡ್ಲಿ, ಹೋಳಿಗೆ, ಹಪ್ಪಳ ಅಬ್ಬಬ್ಟಾ ಹೀಗೆ ಹೇಳುತ್ತಾ ಹೋದರೆ ಹಲಸಿನ ಹಣ್ಣಿನಿಂದ ಮಾಡಬಹುದಾದ ತಿನಿಸುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಬಹಳಷ್ಟು ಮಂದಿಗೆ ಹಲಸು ಬರಿ ಹಣ್ಣಾಗಿ ಗೊತ್ತೇ ಹೊರತು ಆದರಿಂದ ಮಾಡಬಹುದಾದ ತಿನಿಸುಗಳ ಬಗ್ಗೆ ಗೊತ್ತಿಲ್ಲ. ಅದೇನೇ ಇರಲಿ ,ಈಗ ನಾವು ಹಲಸಿನ ಹಣ್ಣಿನ ದೋಸೆ ಮಾಡುವುದು ಹೇಗೆ ಎಂಬುದು ತಿಳಿದುಕೊಳ್ಳೋಣ….

ಬೇಕಾಗುವ ಸಾಮಗ್ರಿಗಳು

  • ಬೆಳ್ತಿಗೆ ಅಕ್ಕಿ 2ಕಪ್‌,
  • ಹಲಸಿನ ಹಣ್ಣಿನ ಸೊಳೆ 15ರಿಂದ 20,
  • ಬೆಲ್ಲ ಸ್ವಲ್ಪ,
  • ತೆಂಗಿನ ತುರಿ 1/4 ಕಪ್‌,
  • ಕರಿಮೆಣಸು 3,
  • ಎಣ್ಣೆ/ತುಪ್ಪ ,
  • ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ

ಅಕ್ಕಿಯನ್ನು 3 ರಿಂದ 4 ಗಂಟೆ ನೀರಿನಲ್ಲಿ ನೆನೆಸಿಡಿ. ಹಲಸಿನ ಹಣ್ಣನ್ನು ಬಿಡಿಸಿ ಇಟ್ಟುಕೊಳ್ಳಿ. ಬಿಡಿಸಿದ ಹಣ್ಣನ್ನು ಪುನ: ಕತ್ತರಿಸಿದಲ್ಲಿ ಅರೆಯಲು ಸುಲಭವಾಗುವುದು.

ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು ಮತ್ತು ತೆಂಗಿನ ತುರಿ,ಕರಿಮೆಣಸನ್ನು ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ರುಬ್ಬಿರಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.

Oplus_131072

 

ತದನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿರಿ. ಒಲೆಯ ಮೇಲೆ ಕಾವಲಿ ಇಟ್ಟು ಹಿಟ್ಟಿನಿಂದ ದೋಸೆ ಹೊಯ್ದು ಎರಡೂ ಬದಿಯಲ್ಲೂ ತುಪ್ಪ ಅಥವಾ ಎಣ್ಣೆ ಹಾಕಿ ಕೆಂಪಗೆ ಬೇಯಿಸಿರಿ. ಬಿಸಿ-ಬಿಸಿಯಾದ ಹಲಸಿನ ಹಣ್ಣಿನ ದೋಸೆ ರೆಡಿ. ಇದು ತೆಂಗಿನ ಕಾಯಿ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಕರವಾಗುತ್ತದೆ.

ಹೆಚ್ಚಿನ ಸುದ್ದಿ