Sunday, July 7, 2024
Homeಲೈಫ್ ಸ್ಟೈಲ್Evening Snacks: ಮಳೆ, ಜೊತೆಗೆ ಹಲಸಿನ ಚಿಪ್ಸ್, ಮಜಾನೇ ಬೇರೆ, ಇಲ್ಲಿದೆ ರೆಸಿಪಿ...

Evening Snacks: ಮಳೆ, ಜೊತೆಗೆ ಹಲಸಿನ ಚಿಪ್ಸ್, ಮಜಾನೇ ಬೇರೆ, ಇಲ್ಲಿದೆ ರೆಸಿಪಿ…

ಹಲಸಿನ ಸೀಸನ್ ಎಂದರೆ ಚಿಪ್ಸ್, ಹಲಸಿನ ದಿಂಡಿನ ಪಲ್ಯ, ಹಪ್ಪಳ, ಸಂಡಿಗೆ, ಮೂಳಕ, ಹಲಸಿನ ಹಣ್ಣಿನ ಪಾಯಸ, ಹಲ್ವಾ ಎಂದು ಹತ್ತು ಹಲವು ತಿನಿಸುಗಳು ನಾಲಿಗೆಯ ಚಪಲ ತೀರಿಸುತ್ತವೆ. ಈಗಿನ್ನೂ ಹಲಸಿನ ಕಾಯಿ ತನ್ನ ರಾಜ್ಯಭಾರ ಜೋರಾಗಿ ನಡೆಸುತ್ತಿದೆ. ಕರಾವಳಿ ಹಾಗೂ ಮಲೆನಾಡಿಗೆ ಹೋದರೆ ಮನೆಗಳಲ್ಲಿ ಹಲಸಿನದೇ ಘಮ ಹೊರಹೊಮ್ಮುತ್ತಿರುತ್ತದೆ. ಮಳೆಗಾಲದಲ್ಲಿ ಜಿಟಿಜಿಟಿ ಸದ್ದು ಆಲಿಸುತ್ತಾ ಕಟಿ ಕಟಿ ಹಲಸಿನ ಚಿಪ್ಸ್ ಅನ್ನು ಕರುಂ ಕುರುಂ ಎಂದು ತಿನ್ನಬಹುದು. ಹಾಗಾದರೆ ಹಲಸಿನ ಚಿಪ್ಸ್ ಮಾಡುವುದು ಹೇಗೆ?

ಬೇಕಾಗುವ ಪದಾರ್ಥಗಳು:
* ಉದ್ದ ಮತ್ತು ತೆಳುವಾಗಿ ಕತ್ತರಿಸಿದ ಹಲಸಿನ ತೊಳೆ
* ಕೊಬ್ಬರಿ ಎಣ್ಣೆ ( ಬೇರೆ ಎಣ್ಣೆಯನ್ನೂ ಬಳಸಬಹುದು)
* ಅರಿಶಿನ
* ಉಪ್ಪು, ನೀರು

ಮಾಡೋದು ಹೀಗೆ:

ಒಂದು ಕಪ್ ನೀರಿಗೆ ಅರ್ಧ ಚಮಚ ಅರಿಶಿನ ಮತ್ತು 3 ಚಮಚ ಉಪ್ಪು ಬೆರೆಸಿ ಚೆನ್ನಾಗಿ ಕದಡಿ ಒಂದೆಡೆ ಇಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಕತ್ತರಿಸಿದ್ದ ಹಲಸಿನ ತೊಳೆಗಳನ್ನು ಕೆಂಪಗಾಗುವ ತನಕ ಕರಿಯಬೇಕು.

ಹಲಸಿನ ತೊಳೆಗಳನ್ನು ಕರಿದ ನಂತರ ಅದರ ಮೇಲೆ ಅರಿಶಿನ ಉಪ್ಪು ಬೆರೆಸಿದ ನೀರನ್ನು ಚುಮುಕಿಸಬೇಕು. ಕೊನೆಗೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ನೀರು ಚುಮುಕಿಸಿದ ಹಲಸಿನ ಚಿಪ್ಸನ್ನು ಎರಡು ನಿಮಿಷ ಫ್ರೈ ಮಾಡಿದರೆ ಹಲಸಿನ ಚಿಪ್ಸ್ ರೆಡಿಯಾಗಿರುತ್ತೆ.

ಈ ಮಳೆಗಾಲದಲ್ಲಿ ಸಂಜೆ ಬಿಸಿ ಬಿಸಿ ಹಲಸಿನ ಚಿಪ್ಸ್ ತಿನ್ನುತ್ತಿದ್ದರೆ ಅದರ ರುಚಿ ದುಪ್ಪಟ್ಟು.

ಹೆಚ್ಚಿನ ಸುದ್ದಿ