Sunday, July 7, 2024
Homeಟಾಪ್ ನ್ಯೂಸ್JHARKHAND CM : ಚಂಪೈ ಸೊರೇನ್ ರಿಸೈನ್..! : ಹೇಮಂತ್ ಸೊರೇನ್ 3 ನೇ...

JHARKHAND CM : ಚಂಪೈ ಸೊರೇನ್ ರಿಸೈನ್..! : ಹೇಮಂತ್ ಸೊರೇನ್ 3 ನೇ ಬಾರಿಗೆ ಜಾರ್ಖಂಡ್‌ ಸಿಎಂ?

ನವಹೆಹಲಿ : ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿರುವುದರಿಂದ ಅವರು ಇಂದು ಬಂಧಮುಕ್ತರಾಗಿದ್ದು, ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಕೆಲ ಸಮಯವಷ್ಟೇ ಚಿಎಂ ಹುದ್ದೆ ಅಲಂಕರಿಸಿದ್ದ ಹೇಮಂತ್‌ ಸಹೋದರ ಚಂಪೈ ಸೊರೇನ್‌ ರಾಜಿನಾಮೆ ಸಲ್ಲಿಸಿದ್ದು, ಹೇಮಂತ್‌ ಮತ್ತೆ ಸಿಎಂ ಸ್ಥಾನಕ್ಕೇರುವ ಸಾಧ್ಯತೆ ದಟ್ಟವಾಗಿದೆ.

ದಾಖಲೆಗಳನ್ನು ದುರ್ಬಳಕೆ ಮಾಡಿ ಭೂ ಸ್ವಾಧೀನಪಡಿಸಿಕೊಳ್ಳಲು ನಕಲಿ ದಾಖಲೆಗಳನ್ನು ಬಳಸಿದ ಆರೋಪದ ಮೇಲೆ ಜನವರಿ 31 ರಂದು ಜಾರಿ ನಿರ್ದೇಶನಾಲಯ ಹೇಮಂತ್‌ ಸೊರೇನ್‌ ಅವರನ್ನು ಬಂಧಿಸಿತ್ತು. ಅದೇ ದಿನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಚಂಪೈ ಸೊರೇನ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಹೇಮಂತ್‌ ಸೊರೇನ್‌ ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಂದಾಯ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಭಾನು ಪ್ರತಾಪ್ ಪ್ರಸಾದ್, ಮೊಹಮ್ಮದ್ ಸದ್ದಾಂ ಹುಸೇನ್ ಮತ್ತು ಅಫ್ಸರ್ ಅಲಿ ಕೂಡ ಬಂಧನಕ್ಕೊಳಗಾಗಿದ್ದರು. ಹೇಮಂತ್ ಸೋರೆನ್ ಅವರ ಕಿರಿಯ ಸಹೋದರರಾದ ಬಸಂತ್ ಸೊರೆನ್ ಮತ್ತು ಕುಮಾರ್ ಸೌರವ್ ಅವರ ಜಾಮೀನುದಾರರಾಗಿ ಕಾರ್ಯ ನಿರ್ವಹಿಸಿದ್ದು, ಹೇಮಂತ್‌ ಬಿಡುಗಡೆಗೊಂಡಿದ್ದಾರೆ. ಹೇಮಂತ್ ಸೊರೇನ್ ಜೈಲಿನಿಂದ ಹೊರ ಬಂದ ಕೂಡಲೇ ಪಕ್ಷದ ಕಾರ್ಯಕರ್ತರಿಗೆ ಶುಭಾಶಯ ಕೋರಿದರು. ಅರ್ಜಿದಾರರು ತಲಾ ಎರಡು ಶ್ಯೂರಿಟಿಗಳೊಂದಿಗೆ 50,000 ರೂ.ಗಳ ಜಾಮೀನು ಬಾಂಡ್ ನೀಡುವ ಮೂಲಕ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ ಎಂದು ನ್ಯಾಯಮೂರ್ತಿ ಮುಖೋಪಾಧ್ಯಾಯ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಜಾರ್ಖಂಡ್‌ ಮುಖ್ಯಮಂತ್ರಿ ಬದಲಾವಣೆಯ ಕುರಿತು INDIA ಮೈತ್ರಿ ಕೂಟದ ಶಾಸಕರು ಮತ್ತು ಮುಖಂಡರು ಒಮ್ಮತದ ನಿರ್ಧಾರಕ್ಕೆ ಬಂದಿರುವುದಾಗಿ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಯಾಗಿರುವ ಚಂಪೈ ಸೊರೇನ್‌ ರಾತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಹೇಮಂತ್‌ ಸೊರೇನ್‌ ಮೂರನೇ ಬಾರಿ ಜಾರ್ಖಂಡ್‌ ಮುಖ್ಯಮಂತ್ರಿ ಗಾದಿಗೆ ಏರಲಿದ್ದಾರೆ.

ಹೆಚ್ಚಿನ ಸುದ್ದಿ