Sunday, July 7, 2024
Homeಟಾಪ್ ನ್ಯೂಸ್Hathras stampede : ನೂರಾರು ಜನರನ್ನು ಬಲಿಪಡೆದ ಬೋಲಾಬಾಬಾ ಸತ್ಸಂಗ - ದುರ್ಘಟನೆ ನಡೆದಿದ್ದಾರೂ ಹೇಗೆ?

Hathras stampede : ನೂರಾರು ಜನರನ್ನು ಬಲಿಪಡೆದ ಬೋಲಾಬಾಬಾ ಸತ್ಸಂಗ – ದುರ್ಘಟನೆ ನಡೆದಿದ್ದಾರೂ ಹೇಗೆ?

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ 120ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಕಾಲ್ತುಳಿತ ಸಂಭವಿಸಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಂದು ಸಮುದಾಯದ ಜನರು ಹತ್ರಾಸ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅತ್ಯಂತ ಕಿರುದಾದ ಜಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರು ಹೆಚ್ಚಾಗಿ ಸೇರಿದ್ದರಿಂದ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜನರು ಒಬ್ಬರ ಮೇಲೊಬ್ಬರು ಎಂಬಂತೆ ಕುಳಿತಿದ್ದರಿಂದ ಬಿಸಿಲಿನ ಝಳ ಹಾಗೂ ಬಿಸಿಗಾಳಿಯಿಂದ ಕೂರಲು ಆಗದೇ ಕೆಲವರು ಎದ್ದು ಹೊರಗೆ ಹೋಗಲು ಯತ್ನಿಸಿದರು. ಈ ವೇಳೆ ಪ್ರವಚನ ನೀಡುತ್ತಿದ್ದ ಭೋಲೆ ಬಾಬಾ ಕಾರ್ಯಕ್ರಮದ ಮಧ್ಯದಲ್ಲಿ ಹೋಗಬೇಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸ್ವಯಂಸೇವಕರು ಹೊರಗೆ ಹೋಗಲು ವ್ಯವಸ್ಥೆ ಮಾಡುವುದಾಗಿ ಸರತಿ ಸಾಲಿನಲ್ಲಿ ಬರುವಂತೆ ಸೂಚಿಸಿದ್ದರಿಂದ ಜನರು ಬಿಸಿಲು ತಡೆಯದೇ ಹೊರಗೆ ಹೋಗಲು ಮುಗಿಬಿದ್ದಿದ್ದರು. ಇದರಿಂದ ನೂಕುನುಗ್ಗಲು ಶುರುವಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಕೂಡ ಸರಿಯಾದ ವ್ಯವಸ್ಥೆ ಇರಲಿಲ್ಲ. ಇದರಿಂದ ಟೆಂಪೊ, ಲಾರಿಗಳಲ್ಲಿ ಗಾಯಗೊಂಡವರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಸಮುದಾಯದ ಭವನದ ಬಳಿ ನೂರಾರು ಜನರ ಶವಗಳು ಎಲ್ಲೆಂದರಲ್ಲಿ ಬಿದ್ದು ಭೀಕರ ವಾತಾವರಣ ಸೃಷ್ಟಿಯಾಗಿತ್ತು.

ಹೆಚ್ಚಿನ ಸುದ್ದಿ