Sunday, July 7, 2024
Homeಕ್ರೈಂHathras Stampede: ಹತ್ರಾಸ್ ಕಾಲ್ತುಳಿತ ದುರಂತ - ಬಾಬಾ ಎಸ್ಕೇಪ್ , ಆಯೋಜಕರ ವಿರುದ್ದ ಎಫ್‌ಐಆರ್!

Hathras Stampede: ಹತ್ರಾಸ್ ಕಾಲ್ತುಳಿತ ದುರಂತ – ಬಾಬಾ ಎಸ್ಕೇಪ್ , ಆಯೋಜಕರ ವಿರುದ್ದ ಎಫ್‌ಐಆರ್!

ಲಖನೌ: ಉತ್ತರ ಪ್ರದೇಶದ ಹಾಥರಸ್​​ನ ಫೂಲರಾಯ್‌ ಗ್ರಾಮದಲ್ಲಿ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತದಲ್ಲಿ 121ಕ್ಕೂ ಅನೇಕ ಜನರು ಸಾವಿಗೀಡಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.

ಘಟನೆ ಸಂಬಂಧ ಸ್ವಾಮೀಜಿ ಭೋಲೆ ಬಾಬಾ ಪರಾರಿಯಾಗಿದ್ದು ಕಾರ್ಯಕ್ರಮ ಆಯೋಜಕರಾದ ದೇವಪ್ರಕಾಶ್‌ ಮಧುಕರ್‌ ಸೇರಿದಂತೆ ಇತರರ ವಿರುದ್ಧ ಎಫ್‌ ಐಆರ್ ದಾಖಲಿಸಲಾಗಿದೆ ಎಂದು ಎಎನ್‌ ಐ ವರದಿ ಮಾಡಿದೆ.

ಸತ್ಸಂಗ ನಡೆಸಲು ಅನುಮತಿ ಕೋರಿ ಕಾರ್ಯಕ್ರಮದ ಆಯೋಜಕರು ಸಲ್ಲಿಸಿದ ಅರ್ಜಿಯಲ್ಲಿ 80 ಸಾವಿರ ಭಕ್ತರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ 2.5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, ಕಾಲ್ತುಳಿತಕ್ಕೆ ಜನದಟ್ಟಣೆಯೇ ಕಾರಣವಾಗಿದೆ. ಇದು ಆಯೋಜಕ ಕಡೆಯಿಂದ ಆಗಿರುವ ಲೋಪ ಎಂದು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತರ ನೆರವಿಗೆ ಬಾರದೆ ಸಾಕ್ಷ್ಯ ನಾಶಕ್ಕೆ ಆಯೋಜಕರು ಯತ್ನಿಸುತ್ತಿದ್ದಾರೆ. ಪರಾರಿಯಾದ ಭೋಲೆ ಬಾಬಾಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪ್ರಕರಣದ ಹೆಚ್ಚಿನ ತನಿಖೆಗೆ ಸಿಎಂ ಆದಿತ್ಯ ಯೋಗಿನಾಥ್‌ ಆದೇಶಿಸಿದ್ದಾರೆ.

ಹೆಚ್ಚಿನ ಸುದ್ದಿ