Sunday, July 7, 2024
Homeಕ್ರೈಂHathras satmpede : ಹಥರಾಸ್ ಗಾಯಾಳುಗಳು ದಾಖಲಾದ ಆಸ್ಪತ್ರೆಯಲ್ಲಿ ಏಕೈಕ ವೈದ್ಯ! - ಆಕ್ಸಿಜನ್‌...

Hathras satmpede : ಹಥರಾಸ್ ಗಾಯಾಳುಗಳು ದಾಖಲಾದ ಆಸ್ಪತ್ರೆಯಲ್ಲಿ ಏಕೈಕ ವೈದ್ಯ! – ಆಕ್ಸಿಜನ್‌ ಸೌಲಭ್ಯವೂ ಇಲ್ಲ!!

ಉತ್ತರ ಪ್ರದೇಶ: ಬೋಲೆಬಾಬ ಸಮಾವೇಶ ದಲ್ಲಿ ನಡೆದ ಕಾಲ್ತುಳಿತದ ಭೀಕರ ದುರಂತದಿಂದ ಕಾಲ್ತುಳಿತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ದೊರೆತಿಲ್ಲ. ಆಮ್ಲಜನಕದ ವ್ಯವಸ್ಥೆಯೂ ಆಸ್ಪತ್ರೆಯಲ್ಲಿರಲಿಲ್ಲ. ಚಿಕಿತ್ಸೆ ನೀಡಲು ಒಬ್ಬರೇ ವೈದ್ಯ ಲಭ್ಯವಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾವೇಶ ನಡೆದ ಹಾಲ್ ನಲ್ಲಿ ಒಂದು ಬಾಗಿಲನ್ನು ಮುಚ್ಚಿದ್ದ ಕಾರಣ ಮತ್ತೊಂದು ದ್ವಾರದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿತ್ತು. ಇದರಿಂದಾಗಿಯೇ ಜನ ಸತ್ತರು ಎಂದು ಮತ್ತೊಬ್ಬ ಪ್ರತ್ಯಕ್ಷ ದರ್ಶಿ ಹೇಳಿದ್ದಾರೆ.
ಸ್ಥಳದಿಂದ ಹೊರಡುವುದಕ್ಕಾಗಿ ಮುನ್ನುಗ್ಗುತ್ತಿದ್ದಾಗ ಭಕ್ತರ ಕಾಲಡಿ ಹಲವು ಮಹಿಳೆಯರು ಹಾಗೂ ಮಕ್ಕಳು ಸಿಲುಕಿಬಿದ್ದರು. ಕಾಲಡಿ ಸಿಲುಕಿ ಒದ್ದಾಡುತ್ತಿದ್ದ ಮಹಿಳೆಯರು ಮತ್ತು ಮಕ್ಕಳ ಚೀರಾಟವನ್ನು ಯಾರೂ ಕೇಳಿಸಿ ಕೊಳ್ಳಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಅಲಿಗಢ ಐಜಿ ಶಲಭ್ ಮಾಥುರ್ ಮಾತನಾಡಿ, 116 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅವರಲ್ಲಿ 27 ಶವಗಳು ಇಟಾಹ್ ಶವಾಗಾರದಲ್ಲಿವೆ ಮತ್ತು ಉಳಿದವು ಹತ್ರಾಸ್‌ನಲ್ಲಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ 108 ಮಹಿಳೆಯರು ಮತ್ತು 7 ಮಕ್ಕಳು ಸೇರಿದ್ದಾರೆ. ಬಹುತೇಕರ ಶವಗಳನ್ನು ಗುರುತಿಸಲಾಗಿದೆ. ಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

 

ಹೆಚ್ಚಿನ ಸುದ್ದಿ