Sunday, July 7, 2024
Homeಚುನಾವಣೆ 2023VIRAL NEWS : ಮಕ್ಕಳನ್ನು ಶಾಲೆಗೆ ಕರೆಸಲು ಸ್ವಿಮ್ಮಿಂಗ್ ಪೂಲ್ ರೆಡಿ ಮಾಡಿದ ಪ್ರಾಂಶುಪಾಲರು

VIRAL NEWS : ಮಕ್ಕಳನ್ನು ಶಾಲೆಗೆ ಕರೆಸಲು ಸ್ವಿಮ್ಮಿಂಗ್ ಪೂಲ್ ರೆಡಿ ಮಾಡಿದ ಪ್ರಾಂಶುಪಾಲರು

ಉತ್ತರ ಪ್ರದೇಶ : ಬಿಸಿಲ ಧಗೆಗೆ ತತ್ತರಿಸಿರುವ ಉತ್ತರಪ್ರದೇಶದ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೇಸತ್ತ ಆಡಳಿತ ಮಂಡಳಿಯೊಂದು ಇದೀಗ ಮಕ್ಕಳನ್ನು ಸ್ಕೂಲ್‌ನತ್ತ ಕರೆತರಲು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.

ಉರಿ ಬಿಸಿಲಿನ ಬೇಗೆಗೆ ಉತ್ತರ ಪ್ರದೇಶವು ತತ್ತರಿಸಿ ಹೋಗಿದೆ. ಈ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಮಕ್ಕಳನ್ನು ಶಾಲೆಗೆ ಕರೆತರಬೇಕು ಎಂದು ಸರ್ಕಾರಿ ಸ್ಕೂಲ್‌ನ ಪ್ರಾಂಶುಪಾಲರು ಇದೀಗ ಮಕ್ಕಳಿಗಿದ್ದ ತರಗತಿಯನ್ನೇ ಈಜುಕೊಳವಾಗಿ ಬದಲಾಯಿಸಿದ್ದಾರೆ. ಈ ಮೂಲಕ ಮಕ್ಕಳು ಈಜುವ ಜತೆ ಜತೆಗೆ ಪಾಠ ಕೇಳಲಿ ಎಂದು ವಿಭಿನ್ನ ಪ್ರಯತ್ನಕ್ಕೆ ಇಳಿದಿದ್ದಾರೆ.

ಬೋರ್‌ವೆಲ್ ನೀರನ್ನೇ ಸ್ವಿಮ್ಮಿಂಗ್ ಪೂಲ್ ಗೆ ಪಂಪ್ ಮಾಡಿ ಬಿಟ್ಟಿದ್ದು, ಇದರಿಂದ ಮಕ್ಕಳಿಗೆ ಈಜಲು ತಂಪಾದ ನೀರೇ ಲಭಿಸುತ್ತದೆ. ಈಜಾಡುವ ಮೂಲಕ ಮಕ್ಕಳು ಕೂಡ ಪಾಠವನ್ನು ಆನಂದಿಸುತ್ತಿದ್ದು, ಹಾಜರಾತಿ ಸಂಖ್ಯೆ 38ರಿಂದ ದಿಢೀರ್ 65ಕ್ಕೆ ಏರಿದೆ ಎಂದು ಶಾಲೆಯ ಪ್ರಾಂಶುಪಾಲರು ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ಸ್ವಿಮ್ಮಿಂಗ್ ಪೂಲ್ ಕ್ಲಾಸ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ರೀತಿಯ ಕ್ಲಾಸ್ ರೂಮ್ ಎಲ್ಲೆಡೆ ಮಾಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

ಹೆಚ್ಚಿನ ಸುದ್ದಿ