Sunday, July 7, 2024
Homeಟಾಪ್ ನ್ಯೂಸ್Tulu translate: ಗೂಗಲ್‌ ಭಾಷಾಂತರ ಪಟ್ಟಿಗೆ ಸೇರಿದ ತುಳು ಭಾಷೆ - ತುಳುವರ ಸಂಭ್ರಮ!

Tulu translate: ಗೂಗಲ್‌ ಭಾಷಾಂತರ ಪಟ್ಟಿಗೆ ಸೇರಿದ ತುಳು ಭಾಷೆ – ತುಳುವರ ಸಂಭ್ರಮ!

ಬೆಂಗಳೂರು : ಕರ್ನಾಟಕ ಹೆಮ್ಮೆಯ ಭಾಷೆಯಾದ ತುಳುವಿನಲ್ಲಿ ಇನ್ನು ಮುಂದೆ ಗೂಗಲ್‌ ಭಾಷಾಂತರ ಸೇವೆ ಲಭ್ಯವಾಗಲಿದೆ. ಯಾವುದೇ ಭಾಷೆಯಿಂದ ತುಳು ಭಾಷೆಗೆ ಭಾಷಾಂತರ ಮಾಡಬಹುದಾಗಿದೆ. ವಿಶ್ವಾದ್ಯಂತ ನೆಲೆಸಿದರುವ ಕರ್ನಾಟಕದ ಮೂಲದ ತುಳು ಭಾಷಿಕರು ಈ ಕ್ರಮಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

tulu translate

ಸೌಲಭ್ಯ ಸಧ್ಯಕ್ಕೆ ಕನ್ನಡ ಲಿಪಿಯಲ್ಲಿ ಮಾತ್ರ ಲಭ್ಯವಿದ್ದು, ತುಳು ಲಿಪಿಯಲ್ಲಿಯೇ ತುಳು ಭಾಷೆ ಭಾಷಾಂತರ ಸೇವೆ ಒದಗಿಸುವಂತೆ ತುಳುವರು ಆಗ್ರಹಿಸಿದ್ದಾರೆ.

ರಾಜ್ಯದ ಮಂಗಳೂರು, ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿ ಹಾಗೂ ಉತ್ತರ ಕನ್ನಡ, ಚಿಕ್ಕಮಗಳೂರು ಮುಂತಾದೆಡೆ ಅಲ್ಲಲ್ಲಿ ನೆಲೆಸಿರುವ ತುಳು ಭಾಷೆಗೆ ಕನ್ನಡದಷ್ಟೇ ಪ್ರಾಚೀನತೆಯಿದೆ. ತುಳು ಸಂಸ್ಕೃತಿ ಹಾಗೂ ತುಳು ಜಾನಪದ ಸಾಹಿತ್ಯವೂ ಸಹ ಶ್ರೀಮಂತ ಚರಿತ್ರೆ ಹೊಂದಿದ್ದು, ವಿಶ್ವಾದ್ಯಂತ ನೆಲೆಸಿರುವ ತುಳು ಭಾಷಿಕರು ತಮ್ಮ ಭಾಷಾಭಿಮಾನದಿಂದಲೇ ಪ್ರಸಿದ್ದರಾಗಿದ್ದಾರೆ.

ಕಲೆ, ಸಾಹಿತ್ಯ, ಜಾನಪದ, ಧಾರ್ಮಿಕ ಆಚರಣೆ ಹಾಗೂ ಮತ್ತಿತರ ಕ್ಷೇತ್ರಗಳಲ್ಲಿ ತುಳು ತನ್ನದೇ ಆದ ಪ್ರತ್ಯೇಕ ಛಾಪು ಹೊಂದಿದೆ.

ಹೆಚ್ಚಿನ ಸುದ್ದಿ