Sunday, July 7, 2024
Homeಕ್ರೈಂGold smuggling : ಸ್ಮಗ್ಲಿಂಗ್‌ಗಾಗಿ ಏರ್‌ಪೋರ್ಟ್‌ ಬಳಿ ಅಂಗಡಿ ತೆರೆದ ಯೂಟ್ಯೂಬರ್!

Gold smuggling : ಸ್ಮಗ್ಲಿಂಗ್‌ಗಾಗಿ ಏರ್‌ಪೋರ್ಟ್‌ ಬಳಿ ಅಂಗಡಿ ತೆರೆದ ಯೂಟ್ಯೂಬರ್!

ಚೆನೈ: ಚಿನ್ನ ಕಳ್ಳಸಾಗಣೆಗಾಗಿ ಇಲ್ಲೊಬ್ಬ ಐನಾತಿ ಯೂಟ್ಯೂಬರ್‌ ಏರ್‌ಪೋರ್ಟ್‌ನಲ್ಲಿ ಅಂಗಡಿಯನ್ನೇ ತೆರೆದಿದ್ದಾನೆ.

ಚೆನೈ ಮೂಲದ ಸಬೀರ್ ಅಲಿ ಎಂಬಾತ ಚೆನ್ನೈ ವಿಮಾನ ನಿಲ್ದಾಣದ ಬಳಿ ಅಂಗಡಿಯೊಂದನ್ನು ತೆರೆದಿದ್ದು ಚಿನ್ನದ ಸ್ಮಗ್ಲಿಂಗ್‌ ಇವನ ಮೈನ್‌ ಬ್ಯುಸಿನೆಸ್. ಜತೆಗೆ ಹವ್ಯಾಸಕ್ಕಾಗಿ ಶಾಪಿಂಗ್ ಬಾಯ್ಸ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬ್ಲಾಗ್ ಗಳನ್ನೂ ಮಾಡುತ್ತಿದ್ದ.

ಯೂಟ್ಯೂಬ್ ಮೂಲಕ ಸಂಪರ್ಕಿಸಿ ಚಿನ್ನ ಕಳ್ಳ ಸಾಗಾಟ ಗಾರರು ಸಾಬೀರ್ ಸಹಾಯದಿಂದ ಬರೊಬ್ಬರಿ 167 ಕೋಟಿ. ರೂ. ಮೌಲ್ಯದ ಚಿನ್ನ ಸಾಗಾಟ ಮಾಡಿದ್ದಾರೆ.

ಶ್ರೀಲಂಕಾ ಮೂಲದ ಖದೀಮರು, ಯೂಟ್ಯೂಬ್ ಸಹಾಯದಿಂದ ಸಬೀರ್ ನನ್ನು ಸಂಪರ್ಕಿಸಿ, ನಮಗೆ ವಿಮಾನ ನಿಲ್ದಾಣದಿಂದ ಅಕ್ರಮವಾಗಿ ಚಿನ್ನ ಸಾಗಿಸಲು ಸಹಕರಿಸಬೇಕು. ನಿನಗೆ ಇಂತಿಷ್ಟು ಕಮಿಷನ್ ಕೊಡುತ್ತೇವೆ ಎಂದು ಡೀಲ್ ಕುದುರಿಸಿದ್ದಾರೆ.

ಬಳಿಕ ಸಬೀರ್ ಸಹಾಯದಿಂದ ಬರೊಬ್ಬರಿ 167 ಕೋಟಿ ರೂಪಾಯಿ ಮೌಲ್ಯದ ಚಿನ್ನ ಸಾಗಿಸಿದ್ದಾರೆ. ಅದಕ್ಕಾಗಿ ಸಬೀರ್ ಗೆ 3 ಕೋಟಿ ರೂ. ಕಮಿಷನ್ ನೀಡಿದ್ದಾರೆ. ಈ ರೀತಿ ಒಂದು ಅಂಗಡಿ ಓಪನ್‌ ಮಾಡಿ ಕಕೇವಲ ಒಂದು ಬಾರಿ ಚಿನ್ನ ಸ್ಮಗಲ್‌ ಮಾಡಿದ ಸಾಬೀರ್ ಕೋಟ್ಯಾಧಿಪತಿಯಾಗಿದ್ದಾನೆ

ಈ ಸುದ್ದಿ ತಿಳಿದ ಬಳಿಕ ನಡೆದ ತನಿಖೆಯಲ್ಲಿ ಸಬೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹೆಚ್ಚಿನ ಸುದ್ದಿ