Sunday, July 7, 2024
Homeಟಾಪ್ ನ್ಯೂಸ್VIRAL VIDEO : ಟೆರೇಸ್‌ನಲ್ಲಿ ರೀಲ್‌ ಮಾಡುತ್ತಿದ್ದಾಗ ಸಿಡಿಲು ಹೊಡೆತ: ಹುಡುಗಿ ಜಸ್ಟ್‌ ಮಿಸ್! - VIDEO

VIRAL VIDEO : ಟೆರೇಸ್‌ನಲ್ಲಿ ರೀಲ್‌ ಮಾಡುತ್ತಿದ್ದಾಗ ಸಿಡಿಲು ಹೊಡೆತ: ಹುಡುಗಿ ಜಸ್ಟ್‌ ಮಿಸ್! – VIDEO

ಬಿಹಾರ: ಟೆರೇಸ್‌ನಲ್ಲಿ ರೀಲ್‌ ಮಾಡುತ್ತಿದ್ದ ಹುಡುಗಿಯೊಬ್ಬಳು ಸಿಡಿಲು ಹೊಡೆತದಿಂದ ಕೂದಲೆಳೆಯಲ್ಲಿ ಪಾರಾದ ಘಟನೆ ಭಯಾನಕ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಹಾರದ (Bihar) ಸಿರ್ಸಿಯಾ ಬಜಾರ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಸಾನಿಯಾ ಕುಮಾರಿ ಎಂಬ ಹುಡುಗಿ ಟೆರೇಸ್‌ನಲ್ಲಿ ಮಳೆಯನ್ನು ಆನಂದಿಸುತ್ತಿದ್ದಳು. ಆರಂಭದಲ್ಲಿ ರೀಲ್ ಚಿತ್ರೀಕರಣ ಮಾಡುವಾಗ ಹುಡುಗಿ ಮಳೆಯಲ್ಲಿ ನೃತ್ಯ ಮಾಡುತ್ತಿದ್ದಳು. ಆಕೆಯ ಸ್ನೇಹಿತೆ ಆ ಕ್ಷಣವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಳು. ಈ ವೇಳೆ ಮಿಂಚೊಂದು ಪಕ್ಕದಲ್ಲಿ ಬಡಿದಿದೆ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ಸಿರ್ಸಿಯಾ ಜಿಲ್ಲೆಯಲ್ಲಿ ಮುಂದಿನ ನಾಲ್ಕರಿಂದ ಐದು ದಿನಗಳವರೆಗೆ ಮಳೆ ಮುಂದವರಿಯಲಿದೆ ಎಂದು ಸೂಚನೆ ನೀಡಿದೆ.

ಹೆಚ್ಚಿನ ಸುದ್ದಿ