Sunday, July 7, 2024
Homeಕ್ರೀಡೆTEAM INDIA : ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಕಾತರದಿಂದ ಕಾದು ಕುಳಿತ ಅಭಿಮಾನಿಗಳು - VIDEO 

TEAM INDIA : ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಕಾತರದಿಂದ ಕಾದು ಕುಳಿತ ಅಭಿಮಾನಿಗಳು – VIDEO 

ಮುಂಬೈ : 17 ವ‍ರ್ಷಗಳ ಬಳಿಕ  ಟಿ20 ವಿಶ್ವಕಪ್ ಗೆದ್ದ  ಭಾರತ ತಂಡ ಬಾರ್ಬಡೋಸ್‌ನಿಂದ ತವರಿಗೆ ಮರಳಿದೆ. ದೆಹಲಿಯಲ್ಲಿ ಚಾಂಪಿಯನ್‌ಗಳಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

ಇದೀಗ ವಿಜಯೋತ್ಸವದ ಮುಂಬೈನ ವಾಂಖೆಡೆಯಲ್ಲಿ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮೆರವಣಿಗೆ ಬಳಿಕ ವಾಂಖೆಡೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಭಿಮಾನಿಗಳಿಗೆ ಉಚಿತವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

 ಮುಂಬೈನಲ್ಲಿ ಸಂಜೆ 5 ರಿಂದ 7 ಗಂಟೆ ವರೆಗೆ  ಭಾರತ ತಂಡವು ಮರೈನ್ ಡ್ರೈವ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ವಿಕ್ಟರಿ ಪರೇಡ್ ನಡೆಸಲಿದೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲು ನಾಯಕ ರೋಹಿತ್ ಶರ್ಮಾ ಮತ್ತು ಜಯ್‌ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಆಹ್ವಾನ ನೀಡಿದ್ದಾರೆ

ಮುಂಬೈನಲ್ಲಿ ನಡೆಯುವ ವಿಜಯೋತ್ಸವದ ಮೆರವಣಿಗೆಯನ್ನು ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೀಕ್ಷಿಸಬಹುದು.

 ಇದಲ್ಲದೇ ವಾಂಖೆಡೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ. ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಉಚಿತವಾಗಿ ನೋಡಿ ಕಣ್ತುಂಬಿಗೊಳ್ಳಲು ಅವಕಾಶ ನೀಡಲಾಗಿದೆ.

ಹೆಚ್ಚಿನ ಸುದ್ದಿ