Sunday, July 7, 2024
Homeಟಾಪ್ ನ್ಯೂಸ್VIRAL VIDEO: ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ ವಿದೇಶಿ ಜೋಡಿ

VIRAL VIDEO: ಅಣ್ಣಾವ್ರ ಹಾಡಿಗೆ ಹೆಜ್ಜೆ ಹಾಕಿದ ವಿದೇಶಿ ಜೋಡಿ

ರಷ್ಯಾ: ಡಾ. ರಾಜ್‌ಕುಮಾರ್‌  (Rajkumar) ಅಭಿನಯಿಸಿರುವ ಮಾನವನಾಗಿ ಹುಟ್ಟಿದ ಮೇಲೆ ಹಾಡಿಗೆ ವಿದೇಶಿ ಜೋಡಿ ಹೆಜ್ಜೆ ಹಾಕಿದ್ದಾರೆ.

ರಷ್ಯಾದ (Russia) ಜೋಡಿ ಡಾ. ರಾಜ್‌ಕುಮಾರ್‌ ಅವರು ಅಭಿನಯಿಸಿದ ಮಾನವನಾಗಿ ಹುಟ್ಟಿದ ಮೇಲೆ ಹಾಡಿಗೆ ಅಭಿನಯಿಸಿದ್ದಾರೆ. ಈ ವಿಡಿಯೋವನ್ನು ಅಲೆಕ್ಸ್‌ ಎನ್ನುವವರು ಡಾ. ವೈಟ್‌ ಸ್ಟಾರ್‌ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ರೀಲ್ಸ್‌ ಸಾಮಾಜಿಕ ಜಾಲತಾಣದಲ್ಲಿ ಅನೇಕರಿಂದ ಮೆಚ್ಚುಗೆಯನ್ನು ಪಡೆದಿದೆ. ಈ ರೀಲ್ಸ್‌ ಪೋಸ್ಟ್‌ ಮಾಡಿ ಒಂದು ದಿನವಾಗಿದ್ದು, ಈವರೆಗೆ ಈ ರೀಲ್‌ ಅನ್ನು 3.3 ಮಿಲಿಯನ್‌ ಜನರು ವೀಕ್ಷಿಸಿದ್ದಾರೆ. ಅದೇ ರೀತಿ 7 ಸಾವಿರಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ.

ಈ ರಷ್ಯಾದ ಜೋಡಿ ಕೇವಲ ಇದೊಂದೇ ಹಾಡಿಗೆ ಅಭಿನಯಿಸಿಲ್ಲ.. ಉತ್ತರ ಕರ್ನಾಟಕದ ಜಾನಪದಗೀತೆ ನಾ ಡ್ರೈವರಾ.., ಮಸ್ತ್‌ ಮಸ್ತ್‌ ಹುಡುಗಿ ಬಂದ್ಲು.. ಹಾಡಿಗೆ ಅಭಿನಯಿಸಿದ್ದಾರೆ. ಅದೇ ರೀತಿ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಬೊಂಬೆ ಹೇಳುತೈತೆ ಹಾಡನ್ನು ಹಾಡಿದ್ದಾರೆ. ಕನ್ನಡದ ಹೊರೆತು ಪಂಜಾಬಿ ಹಾಗೂ ಹಿಂದಿ ಹಾಡುಗಳಿಗೆ ರೀಲ್ಸ್‌ ಮಾಡಿದ್ದಾರೆ.

 

View this post on Instagram

 

A post shared by Alex (@dr.white.star)

ಹೆಚ್ಚಿನ ಸುದ್ದಿ