Sunday, July 7, 2024
Homeಲೈಫ್ ಸ್ಟೈಲ್Evening Snacks: ಮಳೆಗಾಲದ ಸಂಜೆ ಮನೆಯಲ್ಲೇ ಮಾಡಿ ತಿನ್ನಿ ಬಿಸ್ಕತ್ತು ಬೋಂಡಾ; ಇಲ್ಲಿದೆ ರೆಸಿಪಿ

Evening Snacks: ಮಳೆಗಾಲದ ಸಂಜೆ ಮನೆಯಲ್ಲೇ ಮಾಡಿ ತಿನ್ನಿ ಬಿಸ್ಕತ್ತು ಬೋಂಡಾ; ಇಲ್ಲಿದೆ ರೆಸಿಪಿ

ಹೊರಗೆ ಮಳೆ ಸುರಿಯುತ್ತಿರುವಾಗ ಕಾಫಿ, ಟೀ ಜೊತೆಗೆ ಬಿಸಿ-ಬಿಸಿಯಾದ ಟೇಸ್ಟಿ ವೆಜ್ ಲಾಲಿಪಾಪ್ಸವಿಯದಿದ್ದರೆ, ಮಳೆಗಾಲದ ಮೋಜನ್ನು ಮಿಸ್ ಮಾಡಿಕೊಂಡಂತೆ. ಬೇಸಿಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಇದೀಗ ವರುಣರಾಯ ತಂಪೇರೆಯುತ್ತಿದ್ದಾನೆ. ಈ ಸಮಯದಲ್ಲಿ ನಿಮ್ಮ ನೆಚ್ಚಿನ ಕರಿದ ತಿಂಡಿ ತಿನ್ನುವುದರಲ್ಲಿ ಸಿಗೋ ಖುಷಿ ಮತ್ಯಾವುದರಲ್ಲಿಯೂ ಸಿಗುವುದಿಲ್ಲ. ಹಾಗಾಗಿ ಮಳೆಗಾಲ ಅಂದ್ರೆ ಅದೆಷ್ಟೋ ಮಂದಿಗೆ ಬಹಳ ಇಷ್ಟ. ಮಳೆ ಬರುವ ವೇಳೆ ನೀವು ಕೂಡ ನಿಮ್ಮ ಫ್ಯಾಮಿಲಿ ಜೊತೆ ಕುಳಿತು ಹೊಸ ತಿಂಡಿ ಏನಾದರೂ ತಿನ್ನಬೇಕು ಎಂದು ಅಂದುಕೊಂಡಿದ್ದರೆ, ಇಲ್ಲಿದೆ ಹೊಸ ರುಚಿ.

ಬಿಸ್ಕತ್ತು ಬೋಂಡಾಗೆ ಬೇಕಾಗುವ ಸಾಮಗ್ರಿಗಳು
ಕಡಲೆಹಿಟ್ಟು – 1 ಕಪ್, ಬಿಸ್ಕತ್ತು – 1 ಪ್ಯಾಕೆಟ್, ಕೊತ್ತಂಬರಿ – 2 ಚಮಚ, ಮೆಣಸಿನ ಪುಡಿ – 1 ಟೀ ಚಮಚ, ಅರಿಶಿನ ಪುಡಿ – 1/4 ಟೀ ಚಮಚ, ಕರಿಬೇವು – 1 ಚಮಚ, ಅಡಿಗೆ ಸೋಡಾ – 1/4 ಟೀ ಚಮಚ, ಅಡುಗೆ ತುಪ್ಪ, ರುಚಿಗೆ ಉಪ್ಪು

 

ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಕಡಲೆಹಿಟ್ಟನ್ನು ತೆಗೆದುಕೊಂಡು ಸೋಡಾ ಪುಡಿ, ಧನಿಯಾ ಪುಡಿ, ಅರಿಶಿನ, ಖಾರದಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊದಲು ನೀರು ಸೇರಿಸದೆ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ. ಈ ಹಿಟ್ಟು ಸ್ವಲ್ಪ ದಪ್ಪವಾಗಿರಬೇಕು. ಹಿಟ್ಟು ದೋಸೆ ಹಿಟ್ಟಿನ ಹದಕ್ಕಿರಲಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲೆ ಇಡಿ.

ಬಳಿಕ ಬಿಸ್ಕತ್ತುಗಳನ್ನು ಎರಡೂ ಬದಿಗಳಲ್ಲಿ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಯಲ್ಲಿ ಕರಿಯಿರಿ. ಬಿಸ್ಕತ್ತು ಎರಡೂ ಬದಿಗಳಲ್ಲಿ ಗೋಲ್ಡನ್ ಆಗುವವರೆಗೆ ಕಾಯಿಸಿ. ನಿಮ್ಮ ನೆಚ್ಚಿನ ಬಿಸ್ಕೆಟ್ ಬೋಂಡಾ ನಿಮ್ಮ ಮುಂದೆ ಸಿದ್ಧ.

ಇದು ಚಹಾ-ಕಾಫಿಯೊಂದಿಗೆ ಚೆನ್ನಾಗಿ ಹೊಂದುತ್ತದೆ. ಈ ಬಿಸ್ಕತ್ತು ಬೋಂಡಾ ಮಾಡಲು 50 50ಯಂತಹ ಉಪ್ಪಿನಾಂಶ ಇರುವ ಬಿಸ್ಕತ್ತು ಆಯ್ದುಕೊಳ್ಳಿ. ಸಿಹಿ ಬಿಸ್ಕತ್‌ನಲ್ಲಿ ಮಾಡಿದರೆ ರುಚಿ ಚೆನ್ನಾಗಿರುವುದಿಲ್ಲ. ಆದರೆ ಇದನ್ನು ಉಪ್ಪಿನ ಬಿಸ್ಕತ್‌ನಿಂದ ಮಾಡಲಾಗಿರುವುದರಿಂದ ಉಪ್ಪನ್ನು ಸಹ ಸರಿಯಾದ ಪ್ರಮಾಣದಲ್ಲಿ ಸೇರಿಸಬೇಕು, ಹೆಚ್ಚು ಉಪ್ಪು ಹಾಕುವುದರಿಂದ ರುಚಿ ಕೆಡಬಹುದು.

ಹೆಚ್ಚಿನ ಸುದ್ದಿ