Sunday, July 7, 2024
Homeಕ್ರೈಂTRAFFIC POLICE : ರಾತ್ರಿ ಹೊತ್ತು ಹೈಬೀಮ್ ಹಾಕಿ ಗಾಡಿ ಓಡಿಸ್ತೀರಾ? - ಹುಷಾರ್!

TRAFFIC POLICE : ರಾತ್ರಿ ಹೊತ್ತು ಹೈಬೀಮ್ ಹಾಕಿ ಗಾಡಿ ಓಡಿಸ್ತೀರಾ? – ಹುಷಾರ್!

ಬೆಂಗಳೂರು : ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಹೈ ಬೀಮ್ ಲೈಟ್​ಗಳನ್ನು  ಅಳವಡಿಸುವುದರ ವಿರುದ್ಧ ಕಠಿಣ ಕ್ರಮಕ್ಕೆ ಬೆಂಗಳೂರು ಪಶ್ಚಿಮ ವಿಭಾಗ ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಇತ್ತೀಚೆಗೆ ಹೈ ಬೀಮ್ ಹಾಕಿ ವಾಹನ ಚಲಾವಣೆಯಿಂದಾಗಿ ಹೆಚ್ಚು ಅಪಘಾತಗಳಾಗುತ್ತಿದ್ದವು, ಈ ನಿಟ್ಟಿನಿಂದ ಇಂತಹ ಲೈಟ್ ಗಳನ್ನು ಬಳಸಬಾರದು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. 

ಇದರ ಬೆನ್ನಲ್ಲೇ  ಬೆಂಗಳೂರು ಪಶ್ಚಿಮ ವಿಭಾಗ ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೈ ಬೀಮ್ ಲೈಟ್ ಹಾಕಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ದ ದಂಡ ವಿಧಿಸಿದ್ದಾರೆ

ಕಾರ್ಯಾಚರಣೆಯಲ್ಲಿ 239 ಚಾಲಕರ ವಿರುದ್ದ  ಐ ಎಂ ವಿ ಕಾಯ್ದೆ 177 ರ ಅಡಿ ಪ್ರಕರಣ ದಾಖಲಾಗಿದ್ದು, ಚಾಲಕರಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ. 

ಹೆಚ್ಚಿನ ಸುದ್ದಿ