Tuesday, July 2, 2024
Homeಕ್ರೈಂFake letter head : ಸಚಿವ ಮಹದೇವಪ್ಪ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಮಾಡಿದ್ದ...

Fake letter head : ಸಚಿವ ಮಹದೇವಪ್ಪ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ ಮಾಡಿದ್ದ ಆರೋಪಿ ಅರೆಸ್ಟ್‌

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ (H C Mahadevappa) ಅವರ ಹೆಸರಿನಲ್ಲಿ ನಕಲಿ ಲೆಟರ್‌ ಹೆಡ್‌ (Fake letter head) ಸೃಷ್ಟಿಸಿ ದುರ್ಬಳಕೆ ಮಾಡಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಮಹದೇವ ಬಂಧಿತ ಆರೋಪಿಯಾಗಿದ್ದು, ಸಚಿವರ ಆಪ್ತ ಕಾರ್ಯದರ್ಶಿ ನೀಡಿದ್ದ ದೂರನ್ನಾಧರಿಸಿ ಬೆಂಗಳೂರು ಪೊಲೀಸರು (Bangalore police) ತನಿಖೆ ಕೈಗೊಂಡಿದ್ದರು.

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಿಗೆ ಸಚಿವರ ಹೆಸರಿನಲ್ಲಿ ಸುಮಾರು 20 ಮಂದಿಗೆ ಶಿಫಾರಸು ಪತ್ರ ನೀಡಿದ್ದ.

ಇಷ್ಟೇ ಅಲ್ಲದೇ ಮಹದೇವ ಸಚಿವರ ಕಚೇರಿಗೂ ಸಹ ಅದೇ ನಕಲಿ ಪತ್ರವನ್ನು ಕಳುಹಿಸಿದ್ದ. ಸಚಿವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಲೆಟರ್‌ ಹೆಡ್‌ ಮತ್ತು ಸಚಿವರ ಸಹಿಯನ್ನು ನೋಡಿ ಸಂಶಯಗೊಂಡು ಪರಿಶೀಲನೆ ನಡೆಸಿದಾಗ ನಕಲಿ ಎಂದು ತಿಳಿದುಬಂದಿತ್ತು.

ಗುರುವಾರ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಸುದ್ದಿ