Sunday, July 7, 2024
Homeಕ್ರೈಂFAKE LETTER HEAD : ಶಾಸಕರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿ! - ದೂರು...

FAKE LETTER HEAD : ಶಾಸಕರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿ! – ದೂರು ದಾಖಲು

ಕಲಬುರಗಿ : ಶಾಸಕರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ ಅದರ ಮೂಲಕ ಸುಳ್ಳು ಸುದ್ದಿ ಹರಿಬಿಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈ ಕುರಿತು ಆಳಂದ ಶಾಸಕ ಬಿ.ಆ.ಪಾಟೀಲ್ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ದೂರು ದಾಖಲಿಸಿದ್ದಾರೆ.

ನನ್ನ ಹೆಸರಿನಲ್ಲಿ ಹಳೆಯ ವಿಳಾಸದಲ್ಲಿರುವ ನಾಲ್ಕು ವರ್ಷ ಹಳೆಯದಾದ ಲೆಟರ್ ಹೆಡ್ನ್ನು ನಕಲಿಸಿ, ಅದರಲ್ಲಿ ಸಹಿಯನ್ನೂ ಕೂಡ ಹಸ್ತಾಕ್ಷರದ ಪ್ರತಿಯ ಮೂಲಕ ಕಾಪಿ ಪೇಸ್ಟ್ ಮಾಡಲಾಗಿದೆ. ಈ ಲೆಟರ್ ಹೆಡ್ ಮೂಲಕ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ರಾಜಕೀಯ ವೈಷಮ್ಯ ಹುಟ್ಟಿಸಲು ಪ್ರಯತ್ನಿಸಲಾಗಿದೆ ಎಂದು ಬಿ.ಆರ್.ಪಾಟೀಲ್ ದೂರಿನಲ್ಲಿ ತಿಳಿಸಿದ್ದಾರೆ.

ಜೊತೆಗೆ, ಅನುದಾನದ ಬಿಡುಗಡೆಗೂ ಸಹ ಸಚಿವರು ಮೂರನೇ ವ್ಯಕ್ತಿಯ ಮೂಲಕ ಬೇಡಿಕೆಯಿಡುತ್ತಿರುವುದಾಗಿ ನಾನು ಆರೋಪಿಸಿರುವಂತೆ ತಪ್ಪು ಕಲ್ಪನೆ ಹುಟ್ಟಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಶಾಸಕ ಬಿ.ಆರ್.ಪಾಟೀಲ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

B R Pateel complaint

ಹೆಚ್ಚಿನ ಸುದ್ದಿ