Sunday, July 7, 2024
Homeಕ್ರೈಂFAKE AK-47 REELS : ರೀಲ್ಸ್ ಶೋಕಿಗಾಗಿ ನಕಲಿ ಗನ್ ಬಳಕೆ: ಸಿನಿಮಾ ತಂತ್ರಜ್ಞನಿಗೆ...

FAKE AK-47 REELS : ರೀಲ್ಸ್ ಶೋಕಿಗಾಗಿ ನಕಲಿ ಗನ್ ಬಳಕೆ: ಸಿನಿಮಾ ತಂತ್ರಜ್ಞನಿಗೆ ಸಂಕಷ್ಟ!

ಬೆಂಗಳೂರು: ನಕಲಿ ಎಕೆ-47 ರೈಫಲ್ಸ್ ಹಾಗೂ ಬಾಡಿಗಾರ್ಡ್ ಜೊತೆ ರೀಲ್ಸ್ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿರುವ ಸಾಮಾಜಿಕ ಜಾಲತಾಣದ ಇನ್ಫೂಯೆನ್ಸರ್ (ಪ್ರಭಾವಿ ವ್ಯಕ್ತಿ)ಗೆ ನಕಲಿ ಗನ್ ಪೂರೈಸಿದ್ದೇ ಸಿನಿಮಾದ ಟೆಕ್ನಿಷಿಯನ್ ಎಂಬುದು ತನಿಖೆಗೆ ವೇಳೆ ಬಹಿರಂಗವಾಗಿದೆ.

ಯಾರೋ ಒಬ್ಬ ಎಕೆ-47 ಗನ್ ಹಿಡಿದು ತಿರುಗಾಡುತ್ತಿದ್ದಾನೆ ಎಂದು ಸಾರ್ವಜನಿಕರೊಬ್ಬರು ನೀಡಿದ ದೂರಿನ ಮೇರೆಗೆ ಕೊತ್ತನೂರು ಪೊಲೀಸರು ಅರುಣ್ ಕಟಾರೆ ಎಂಬಾತನನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಕಾಯ್ದೆಯಡಿ ಕೆಲವು ದಿನಗಳ ಹಿಂದೆಯಷ್ಟೇ ಬಂಧಿಸಿದ್ದರು.

ನೂತನ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 290ರ ಪ್ರಕಾರ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ನಕಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಕೆಜಿಎಫ್ ಚಿತ್ರದ ತಂತ್ರಜ್ಞ ಸಾಹಿಲ್ ಎಂಬಾತ ನಕಲಿ ನೀಡಿರುವುದು ಬೆಳಕಿಗೆ ಬಂದಿದೆ.

ಕಬ್ಜ, ಭೈರತಿ ರಣಗಲ್, ಮಫ್ತಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ತಂತ್ರಜ್ಞನಾಗಿ ಹೋಂಬಾಳೆ ಫಿಲ್ಮ್ಸ್ ಮತ್ತು ಗೀತಾ ಪಿಕ್ಚರ್ಸ್ ಚಿತ್ರದ ಬ್ಯಾನರ್ ಗಳಲ್ಲಿ ಕೆಲಸ ಮಾಡಿದ್ದ ಸಾಹಿಲ್ ಗೆ ಕೊತ್ತನೂರು ಪೊಲೀಸರು ನೋಟಿಸ್ ಕಳುಹಿಸಿದ್ದು, ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.

ಇದೇ ಸಾಹಿಲ್ ಬಳಿ ಶಾರ್ಟ್ ಮೂವಿಗೆ ಎಂದು ಡಮ್ಮಿ ಗನ್ ಬಾಡಿಗೆ ಪಡೆದಿದ್ದ ಅರುಣ್ ಕಟಾರೆ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಡಮ್ಮಿ ಗನ್ ಬಳಸಿದ್ದಾಗಿ ಬಂಧಿತನಾಗಿದ್ದಾನೆ.

ಪ್ರವಾಸಿ ತಾಣಗಳಲ್ಲಿ ಐಷಾರಾಮಿ ಕಾರುಗಳ ಜೊತೆ, ಯುವತಿಯರ ಜೊತೆ ರೀಲ್ಸ್ ಮಾಡಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದ ಅರುಣ್, ನಕಲಿ ಎಕೆ-47 ಹಿಡಿದು ರೀಲ್ಸ್ ಮಾಡುತ್ತಿದ್ದನ್ನು ಸಾರ್ವಜನಿಕರು ನಿಜವಾದ ಗನ್ ಹಿಡಿದು ತಿರುಗಾಡುತ್ತಿದ್ದಾನೆ ಎಂದು ಭಾವಿಸಿದ್ದರು.

ಹೆಚ್ಚಿನ ಸುದ್ದಿ