Sunday, July 7, 2024
Homeಟಾಪ್ ನ್ಯೂಸ್Endangered species : ಅಪರೂಪದ ಪ್ರಾಣಿ, ಸಸ್ಯ ಸಂಕುಲಗಳ ನಾಶ - ಸಾವಿರ...

Endangered species : ಅಪರೂಪದ ಪ್ರಾಣಿ, ಸಸ್ಯ ಸಂಕುಲಗಳ ನಾಶ – ಸಾವಿರ ತಳಿಗಳು ವಿನಾಶದಂಚಿಗೆ ಸೇರ್ಪಡೆ!

ಹೊಸದಿಲ್ಲಿ: ಹವಾಮಾನ ವೈಪರೀತ್ಯ, ಮನುಷ್ಯನ ಪ್ರಾಕೃತಿಕ ಹಾನಿಯಕಿಂದಾಗಿ ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲಕ್ಕೆ ಅಪಾಯ ಎದುರಾಗಿದ್ದು, ಈಗಾಗಲೇ 45,000 ಜೀವ ಪ್ರಭೇದ ಅಳಿವಿನಂಚಿನಲ್ಲಿದೆ ಎಂದು ವರದಿಯೊಂದು ಹೇಳಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂಖ್ಯೆ 1,000 ಹೆಚ್ಚಳ ವಾಗಿದೆ ಎಂದು ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷ ಣ ಒಕ್ಕೂಟ (ICUN) ಹೇಳಿದೆ.

ಇಂಥ ಪ್ರಭೇದಗಳ ಕುರಿತಾದ 60ನೇ ವರ್ಷದ ವರದಿ ಯನ್ನು ಐಸಿಯುಎನ್‌ ಬಿಡುಗಡೆಗೊಳಿಸಿದ್ದು, ಅದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದೆ.
ಇದಲ್ಲದೇ ಪಾಪಸ್‌ಕಳ್ಳಿ ಜಾತಿಯ ಹೂವು ಕಾಪಿಯಾಪೋವಾ, ಏಷ್ಯಾದ ಆನೆಗಳ ತಳಿಯಲ್ಲಿ ಒಂದಾದ ಬಾರ್ನಿಯೋ ಆನೆ ಉಡದ ಜಾತಿಯ ದೈತ್ಯ ಹಲ್ಲಿ -ಗ್ರಾನ್‌ ಕೆನಾರಿ ಯಾದಂಥ ಜೀವಿಗಳು ಕೂಡ ಈ ಪಟ್ಟಿ ಸೇರಿವೆ.

ಹೆಚ್ಚಿನ ಸುದ್ದಿ