Sunday, July 7, 2024
Homeಚುನಾವಣೆ 2023Election expenditure : ಚುನಾವಣಾ ವೆಚ್ಚದಲ್ಲಿ ಬಿಜೆಪಿಯೇ ಮುಂದು – ಕಾಂಗ್ರೆಸ್‌ ಗಿಂತ ಶೇ...

Election expenditure : ಚುನಾವಣಾ ವೆಚ್ಚದಲ್ಲಿ ಬಿಜೆಪಿಯೇ ಮುಂದು – ಕಾಂಗ್ರೆಸ್‌ ಗಿಂತ ಶೇ 43 ರಷ್ಟು ಹೆಚ್ಚು ಖರ್ಚು!

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಬಿಜೆಪಿಗಿಂತ (BJP) ಎರಡು ಪಟ್ಟು ಹೆಚ್ಚು ಸ್ಥಾನ ಗಳಿಸಿದೆ. ಆದರೆ ಚುನಾವಣಾ ವೆಚ್ಚದಲ್ಲಿ (Election expenditure) ಬಿಜೆಪಿ ಚುನಾವಣಾ ವೆಚ್ಚದಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ ಮುಂದುವರೆದಿರುವುದು ಚುನಾವಣಾ ಆಯೋಗದ ವರದಿಯಿಂದ ತಿಳಿದುಬಂದಿದೆ.

ವಿಧಾನಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್‌ 136.90 ಕೋಟಿ ರೂ. ಖರ್ಚು ಮಾಡಿದ್ದರೆ, ಬಿಜೆಪಿ ಅಧಿಕೃತ ವೆಚ್ಚ 196.7 ಕೋಟಿ ರೂ. ಗಳಿಷ್ಟಿದೆ. ಇದು ಕಾಂಗ್ರಸ್‌ ವೆಚ್ಚಕ್ಕಿಂತ ಶೇ 43 ರಷ್ಟು ಹೆಚ್ಚಾಗಿದೆ.

ಗುರುವಾರ ಚುನಾವಣಾ ಆಯೋಗವು ಪ್ರಕಟಿಸಿರುವ ವರದಿಯಲ್ಲಿ ಟಿವಿ ಚಾನೆಲ್‌ಗಳು, ಪತ್ರಿಕೆಗಳು, ಫೇಸ್‌ಬುಕ್, ಗೂಗಲ್ ಮತ್ತು ವಾಟ್ಸ್‌ಆಯಪ್‌ಗಳಿಗೆ ಜಾಹೀರಾತು ಪಾವತಿಗಳ ವಿವರಗಳೂ ಸಹ ಸೇರಿವೆ. ಒಟ್ಟು 196.70 ಕೋಟಿ ರೂ.ಗಳಲ್ಲಿ ಬಿಜೆಪಿಯು 149.36 ಕೋಟಿ ರೂ.ಗಳನ್ನು ಪಕ್ಷದ ಸಾಮಾನ್ಯ ಪ್ರಚಾರದ ವೆಚ್ಚ ಮತ್ತು 47.33 ಕೋಟಿ ರೂ.ಗಳನ್ನು ಅಭ್ಯರ್ಥಿಗಳ ಖರ್ಚು ಎಂದು ಘೋಷಿಸಿದೆ. ಪಕ್ಷವು ಜಾಹೀರಾತು ಮುದ್ರಣ, ಎಲೆಕ್ಟ್ರಾನಿಕ್, ಬೃಹತ್ ಸಂದೇಶಗಳು, ವೆಬ್‌ಸೈಟ್‌ಗಳು ಮತ್ತು ಟಿವಿ ಚಾನೆಲ್‌ಗಳಿಗೆ 78.10 ಕೋಟಿ ರೂ. , ಬಿಜೆಪಿ ಸ್ಟಾರ್ ಪ್ರಚಾರಕರು ಮತ್ತು ಇತರ ನಾಯಕರ ಪ್ರಯಾಣ ವೆಚ್ಚ 37.64 ಕೋಟಿ ರೂ. , ಕೇಂದ್ರ ಕಚೇರಿ ನಾಯಕರ ಪ್ರಯಾಣಕ್ಕೆ 8.05 ಕೋಟಿ ರೂ, ಸಮೀಕ್ಷೆಗಾಗಿ 5.90 ಲಕ್ಷ ರೂ. ವೆಚ್ಚವಾಗಿದೆ ಎಂದು ಬಿಜೆಪಿ ಲೆಕ್ಕ ನೀಡಿದೆ.

ಹೆಚ್ಚಿನ ಸುದ್ದಿ