Sunday, July 7, 2024
Homeಕ್ರೈಂDRIVERS PROTEST : ಆಟೋ ಹಾಗೂ ಕ್ಯಾಬ್ ಚಾಲಕರಿಂದ ಸಾರಿಗೆ ಇಲಾಖೆಯಿಂದ ಮುತ್ತಿಗೆ 

DRIVERS PROTEST : ಆಟೋ ಹಾಗೂ ಕ್ಯಾಬ್ ಚಾಲಕರಿಂದ ಸಾರಿಗೆ ಇಲಾಖೆಯಿಂದ ಮುತ್ತಿಗೆ 

ಬೆಂಗಳೂರಿನ  ಶಾಂತಿನಗರದಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು ಓಲಾ- ಉಬರ್‌  ಮುಂತಾದ ಆನ್‌ಲೈನ್‌ ಟ್ಯಾಕ್ಸಿ ವ್ಯವಸ್ಥೆಗಳ ವಿರುದ್ಧ ಸಾರಿಗೆ ಇಲಾಖೆ  ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಸಾವಿರಾರು ಆಟೋ, ಕ್ಯಾಬ್‌ಗಳನ್ನು ತಂದಿರುವ ಚಾಲಕರು ತಮ್ಮ ವಾಹನಗಳನ್ನು ಬಿಟಿಎಸ್ ರೋಡ್ ಗೆ ಅಡ್ಡಲಾಗಿ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ಆಟೋ ಕ್ಯಾಬ್‌ಗಳನ್ನು ಎಲ್ಲೆಂದಲ್ಲಿ ನಿಲ್ಲಿಸಿದ್ದರಿಂದ ಬಿಟಿಎಸ್ ರೋಡ್‌ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು.

ಈಗಾಗಲೇ ರಾಜ್ಯ ಸರ್ಕಾರ ಫೆಬ್ರವರಿಯಲ್ಲಿಯೇ ಒನ್ ಸಿಟಿ ಒನ್‌ ರೇಟ್ ಆದೇಶವನ್ನು ಹೊರಡಿಸಿದೆ. ಆದೇಶ ಆಗಿ ಆರು ತಿಂಗಳಾದರೂ ಓಲಾ- ಉಬರ್‌ ಸೇರಿ ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶವನ್ನು ಪಾಲನೆ ಮಾಡ್ತಿಲ್ಲ. 

ಆರ್ ಟಿ ಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಸಾರಿಗೆ ಇಲಾಖೆ  ಮುಖ್ಯ ಕಚೇರಿ  ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದಾರೆ.

ರಾಜ್ಯ ಸರ್ಕಾರ ಪ್ರಯಾಣಿಕರಿಗೆ ತೊಂದರೆ ಆಗಬಾರದು, ಪ್ರಯಾಣಿಕರಿಂದ ದುಪ್ಪಟ್ಟು ದರ ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿದೆ. ಆದರೆ ಓಲಾ- ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ದುಪ್ಪಟ್ಟು ದರವನ್ನು ಪಡೆದುಕೊಳ್ಳುತ್ತಿವೆ.

ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇದರ ಲಾಭವನ್ನು ಚಾಲಕರಿಗೂ ಕೊಡ್ತಿಲ್ಲ. ಇದರಿಂದ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ವಾಹನಗಳನ್ನು ಖರೀದಿ ಮಾಡಿರುವ ಚಾಲಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಈ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಂದು ಇನ್ನಷ್ಟು ದೊಡ್ಡ ಪ್ರತಿಭಟನೆಗೆ ಮುಂದಾಗಿದ್ದಾರೆ.

ವಾಹನಗಳ ಮೌಲ್ಯ ಮತ್ತು ಸರ್ಕಾರ ನಿಗದಿಪಡಿಸಿದ ದರ

ಹತ್ತು ಲಕ್ಷಕ್ಕಿಂತ ಕಡಿಮೆ- ನಿಗದಿತ ದರ- ಕನಿಷ್ಠ 4 ಕಿಮೀ, 100 ರುಪಾಯಿ) ಪ್ರತಿ ಕಿಮೀಗೆ- 24 ರುಪಾಯಿ

10ರಿಂದ 15 ಲಕ್ಷದ ವಾಹನ- 115 ರುಪಾಯಿ- 28 ರುಪಾಯಿ

15 ಲಕ್ಷಕ್ಕಿಂತ ಹೆಚ್ಚು – 130 ರುಪಾಯಿ- 32 ರುಪಾಯಿ

ಚಾಲಕರ ಬೇಡಿಕೆಗಳು:

1) ಓನ್ ಸಿಟಿ ಓನ್ ಫೇರ್ ಜಾರಿಯಾಗಬೇಕು

2) ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಲ್ಲಬೇಕು

3) ಆರ್ಟಿಓ ಅಧಿಕಾರಿಗಳು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಕಾರ್ಯಾಚರಣೆ ಮಾಡಬೇಕು

4) ಪೋರ್ಟರ್ ಕಂಪನಿಯನ್ನು ಬ್ಯಾನ್ ಮಾಡಬೇಕು

5) ಸ್ಕೂಲ್ ವಾಹನಗಳಿಗೆ ಪರ್ಮಿಟ್ ನೀಡಬೇಕು

ಹೆಚ್ಚಿನ ಸುದ್ದಿ