Sunday, July 7, 2024
Homeಟಾಪ್ ನ್ಯೂಸ್JOB ALERT: ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ; ವಿದ್ಯಾರ್ಹತೆ, ಅರ್ಹತೆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ

JOB ALERT: ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ; ವಿದ್ಯಾರ್ಹತೆ, ಅರ್ಹತೆ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ

ಬೆಂಗಳೂರು: ರೈಲು ಕೋಚ್​ಗಳ ತಯಾರಿಕಾ ಘಟಕವಾದ ಚೆನ್ನೈನ ಇಂಟೆಗ್ರಲ್​ ಕೋಚ್​ ಫ್ಯಾಕ್ಟರಿಯಲ್ಲಿ ಅಪ್ರೆಂಟಿಸ್​ಶಿಪ್​ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಪದವೀಧರರು ಅರ್ಜಿ ಸಲ್ಲಿಸಬಹುದು. ಒಟ್ಟು 1,010 ಹುದ್ದೆಗಳಿವೆ.

ಹುದ್ದೆಗಳ ವಿವರ: ಕೇಂದ್ರ ಸರ್ಕಾರದ ಅಪ್ರೆಂಟಿಸ್​ ಕಾಯ್ದೆ 1961ರ ಅಡಿ ನೇಮಕಾತಿ ನಡೆಯಲಿದೆ.

  • ಕಾರ್ಪೆಂಟರ್​​ – 90
  • ಎಲೆಕ್ಟ್ರಿಷಿಯನ್​ – 200
  • ಫಿಟ್ಟರ್​ – 260
  • ಮೆಕ್ಯಾನಿಕ್​ – 90
  • ಪೇಂಟರ್​​ – 90
  • ವೆಲ್ಡರ್​​ – 260
  • ಎಂಎಲ್​ಟಿ ರೇಡಿಯಾಲಜಿ – 5
  • ಎಂಎಲ್​ಟಿ ರೇಡಿಯಾಲಜಿ – 5
  • ಪಿಎಎಸ್​ಎಎ – 10

ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿ ಬಳಿಕ ಎರಡು ವರ್ಷದ ಐಟಿಐ ಪದವಿ.

ವಯೋಮಿತಿ: ಕನಿಷ್ಠ 15 ವರ್ಷ, 24 ವರ್ಷ ಮೀರಿರಬಾರದು. ​

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 100 ರೂ ಜೊತೆಗೆ ಸೇವಾ ಶುಲ್ಕವನ್ನು ಅಭ್ಯರ್ಥಿಗಳು ಭರಿಸಬೇಕು. ಪ.ಜಾ, ಪ.ಪಂ, ವಿಶೇಷಚೆತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ವಿಶೇಷ ಸೂಚನೆ: ಈ ಹುದ್ದೆಗಳನ್ನು 1 ವರ್ಷದ ಅವಧಿಗೆ ನೇಮಕ ಮಾಡಲಾಗುತ್ತಿದೆ. ಮಾಸಿಕ 7,000 ರೂ ಸ್ಟೈಫಂಡ್​ ನೀಡಲಾಗುತ್ತದೆ.

ಮೇ 22ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಜೂನ್​ 21. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ pb.icf.gov.in ಇಲ್ಲಿಗೆ ಭೇಟಿ ನೀಡಿ.

ಹೆಚ್ಚಿನ ಸುದ್ದಿ