Sunday, July 7, 2024
Homeಟಾಪ್ ನ್ಯೂಸ್DK Shivakumar: ನಾನು ಯಾರು ಗೊತ್ತಾ?: ಸಭಿಕರಿಗೆ ಡಿಸಿಎಂ ಪ್ರಶ್ನೆ

DK Shivakumar: ನಾನು ಯಾರು ಗೊತ್ತಾ?: ಸಭಿಕರಿಗೆ ಡಿಸಿಎಂ ಪ್ರಶ್ನೆ

ಚನ್ನಪಟ್ಟಣ: ಡಿಸಿಎಂ ಡಿಕೆ ಶಿವಕುಮಾರ್‌ ಅವರು ಇಂದು ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಸಿದ ವೇಳೆ ಸಭಿಕರಲ್ಲಿ “ನಾನು ಯಾರು ಗೊತ್ತಾ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಭಿಕರು ನೀವು ಡಿಕೆ ಶಿವಕುಮಾರ್ ಎಂದು ಹರ್ಷೋದ್ಗಾರ ಮಾಡಿದ್ದಾರೆ.

ಚನ್ನಪಟ್ಟಣದ ಕೋಟೆ ಮಾರಮ್ಮ ದೇವಸ್ಥಾನದ ಆವರಣ ಮತ್ತು ಫರಾನ ಶಾಲೆಯ ಆವರಣದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಹಾಗೂ ನಂತರದಲ್ಲಿ ಮಾತನಾಡಿದ ಅವರು ನಾವೆಲ್ಲ ಬೆಂಗಳೂರು ಜಿಲ್ಲೆಯವರು. ನಾವೆಲ್ಲ ಇದ್ದಿದ್ದು ಬೆಂಗಳೂರಿನಲ್ಲಿ, ಈಗಲೂ ಇರುವುದು ಬೆಂಗಳೂರಿನಲ್ಲಿ. ಇರುವ ಹೆಸರನ್ನು ನಾವೇಕೆ ಕಳೆದುಕೊಳ್ಳಬೇಕು. ನಾವು ಎಲ್ಲಿಗೆ ಸೇರಿದವರು ಎಂಬ ಮಾಹಿತಿ ಬೇಕಾದರೆ ಪಠ್ಯ ಪುಸ್ತಕಗಳನ್ನು ತೆಗೆದುನೋಡಿ. ಹೊಸಕೋಟೆ, ದೇವನಹಳ್ಳಿ, ಮಾಗಡಿ, ಕನಕಪುರ ಹೀಗೆ ನಾವೆಲ್ಲ ಬೆಂಗಳೂರಿಗೆ ಸೇರಿದವರು. ಇನ್ನೆರಡು ದಿನ ಕಾಯಿರಿ ಎಂದರು.

ರಾಮನಗರ, ಚನ್ನಪಟ್ಟಣವನ್ನು ಅವಳಿ ನಗರಗಳನ್ನಾಗಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು ಎಂದು ಕೇಳಿದಾಗ ಅವರು ಎರಡು ಬಾರಿ ಸಿಎಂ ಆಗಿದ್ದರು ಆಗ ಮಾಡಿದ್ರಾ? ನಾನು ಕೊಟ್ಟಮಾತನ್ನು ಮರೆಯುವವನಲ್ಲ. ಮಾತ್ನನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ. ಚನ್ನಪಟ್ಟಣ ಕತ್ತಲಲ್ಲಿದೆ ಈ ಕ್ಷೇತ್ರವನ್ನು ಅಭಿವೃದ್ಧಿ ಪಟ್ಟಣ ಮಾಡಬೇಕು ಎಂದು ಇಲ್ಲಿನ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ದೀಪ ಹಚ್ಚಿದ್ದಾರೆ. ಅವರ ಕೈ ಬಲಪಡಿಸಲು ನಾನು ಬಂದಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದ ಮಧ್ಯೆ ಜೋರು ಮಳೆ ಬಂದಿದ್ದು, ಈ ವೇಳೆ ಡಿಸಿಎಂ, ನೋಡಿ ಮಳೆ ಇನ್ನೂ ಜೋರಾಗಿ ಬರಲಿ. ತಮಿಳುನಾಡಿನವರು ನೀರು ಕೊಡಿ ಎಂದು ಗಲಾಟೆ ಮಾಡುತ್ತಿದ್ದಾರೆ. ಬೋರ್ ವೆಲ್ ಅಲ್ಲಿ ನೀರು ಪಾತಾಳ ಸೇರಿದೆ. ಮಳೆ ಬಂದಷ್ಟು ಒಳ್ಳೆಯದು ಎಂದು ಹೇಳಿದರು.

ಹೆಚ್ಚಿನ ಸುದ್ದಿ