Sunday, July 7, 2024
Homeಟಾಪ್ ನ್ಯೂಸ್CM vs DCM : ಸಿಎಂ ಬಣದ ವಿರುದ್ದ ಹೈಕಮ್ಯಾಂಡ್‌ ಗೆ ಡಿಕೆಶಿ ದೂರು!

CM vs DCM : ಸಿಎಂ ಬಣದ ವಿರುದ್ದ ಹೈಕಮ್ಯಾಂಡ್‌ ಗೆ ಡಿಕೆಶಿ ದೂರು!

ನವದೆಹಲಿ : ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಾ ರಾಜಕೀಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿ ದೂರಿಕೊಂಡಿದ್ದಾರೆ. ದೆಹಲಿ ಭೇಟಿಯ ವೇಳೆ ಡಿಕೆಶಿ ಈ ಪ್ರಸ್ತಾಪವೆತ್ತಿದ್ದು, ಸಿಎಂ ಸಿದ್ದರಾಮಯ್ಯ ಆಪ್ತರಾದ ರಾಜಣ್ಣ ಮುಂತಾದ ಸಚಿವರಿಗೆ ಎಚ್ಚರಿಕೆ ನೀಡುವಂತೆ ಆಗ್ರಹಿಸಿದ್ದಾರೆ.

ಡಿಕೆಶಿ ದೂರನ್ನು ಆಲಿಸಿದ ಮಲ್ಲಿಕಾರ್ಜುನ ಖರ್ಗೆ ಸಮಾಧಾನದಿಂದ ಇರುವಂತೆ ಸೂಚಿಸಿದ್ದು, ಅವರ ಹೇಳಿಕೆಗಳ ಬಗ್ಗೆ ನೀವು ತಲೆ ಕೆಡೆಸಿಕೊಳ್ಳಬೇಡಿ ಎಂದು ಸಂತೈಸಿದ್ದಾರೆ. ಸಿಎಂ ಆಪ್ತರ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಖರ್ಗೆ ಹೇಳಿದ್ದು, ಈ ಬಗ್ಗೆ ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರ ಬಳಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿ ಕಳುಹಿಸಿದ್ದಾರೆ.

ರಾಜ್ಯದಲ್ಲಿ ಕೆಲವು ದಿನಗಳಿಂದ ಹೆಚ್ಚುವಿರ ಡಿಸಿಎಂ ಹುದ್ದೆ ಸೃಷ್ಟಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಧ ಡಿಕೆಶಿ ಶಾಸಕರು, ಸಚಿವರಿಗೆ ವಾರ್ನಿಂಗ್‌ ನೀಡಿದ್ದರೂ ಸಹ ಹೇಳಿಕೆಗಳು ನಿಂತಿಲ್ಲ. ಇದು ಕಾಂಗ್ರೆಸ್‌ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಕ್ಕೆ ಟೀಕೆಯ ವಸ್ತುವಾಗಿ ಪರಿಣಮಿಸಿದೆ.

ಹೆಚ್ಚಿನ ಸುದ್ದಿ