Sunday, July 7, 2024
Homeಟಾಪ್ ನ್ಯೂಸ್FILM CHAMBER : ಡಿ ಗ್ಯಾಂಗ್ ಚಿತ್ರದ ಟೈಟಲ್ ನೋಂದಣಿಗೆ ಫಿಲ್ಮ್ ಚೇಂಬರ್ ನಿರಾಕರಣೆ ​

FILM CHAMBER : ಡಿ ಗ್ಯಾಂಗ್ ಚಿತ್ರದ ಟೈಟಲ್ ನೋಂದಣಿಗೆ ಫಿಲ್ಮ್ ಚೇಂಬರ್ ನಿರಾಕರಣೆ ​

ಬೆಂಗಳೂರು : ಡಿ ಗ್ಯಾಂಗ್​ ಹೆಸರನ್ನು ಸಿನಿಮಾ ಟೈಟಲ್‌ ಮಾಡಿಕೊಳ್ಳೋ ಪ್ರಯತ್ನಗಳು ಕೆಲ ನಿರ್ದೇಶಕ ಸತತ ಪ್ರಯತ್ನಿಸುತ್ತಿದ್ದು, ಇದೀಗ ಫಿಲ್ಮ್​ ಚೇಂಬರ್​ ಅವಕಾಶ ಕಲ್ಪಿಸಲು ನಿರಾಕರಿಸಿದೆ ಎನ್ನಲಾಗಿದೆ. 

ಪಿಎಂ ಫಿಲಮ್ಸ್ ನಿರ್ಮಾಣ ಸಂಸ್ಥೆಯ ಮಂಜು ಎನ್ ನಾಯಕ್ ಎಂಬುವರು ಡಿ ಗ್ಯಾಂಗ್ ಹೆಸರಿನ ನೋಂದಣಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. 

ಆದರೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ ಸುರೇಶ್ ಈ ಹೆಸರನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದರ ಬೆನ್ನಲ್ಲೇ ನಿರ್ದೇಶಕ ರಾಖಿ ಸೊಮ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ನಾವು ಈ ಟೈಟಲ್​ನ ಮೇಲೆ ಸುಮಾರು ಎರಡು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಯೂಟ್ಯೂಬ್​ನಲ್ಲಿ ಡಿ ಗ್ಯಾಂಗ್ ಎನ್ನುವ ಹಾಡು ಬಿಡುಗಡೆ ಆಗಿದೆ. ಈಗ ನಡೆಯುತ್ತಿರುವ ದರ್ಶನ್ ಅವರ ಪ್ರಕರಣಕ್ಕೂ ನಮ್ಮ ಟೈಟಲ್​ಗೂ ಯಾವುದೇ ಸಂಬಂಧವಿಲ್ಲ . 

ಆದರೆ ನಮ್ಮ ಟೈಟಲ್ ಅನ್ನು ಯಾವ ಕಾರಣಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದೆ ಎಂಬುದಕ್ಕೆ ಕಾರಣ ಗೊತ್ತಾಗುತ್ತಿಲ್ಲ ಎಂದು ನಿರ್ದೇಶಕ ರಾಖಿ ಸೋಮ್ಲಿ ಆಕ್ರೋಶ ಹೊರ ಹಾಕಿದ್ದಾರೆ

ಈ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ ಸುರೇಶ್ ಮಾತನಾಡಿದ್ದು,  ನಟ ದರ್ಶನ್ ಅವರ ಪ್ರಕರಣ ವಿಚಾರಣೆ ನಡೆಯುತ್ತಿರುವ ಕಾರಣ ಟೈಟಲ್ ನೀಡಲಾಗುವುದಿಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ