Sunday, July 7, 2024
Homeಟಾಪ್ ನ್ಯೂಸ್DENGUE CASE : ವೇಗವಾಗಿ ಹಬ್ಬುತ್ತಿದೆ ಡೆಂಘಿ ಜ್ವರ - ಐದು ವರ್ಷದಲ್ಲೇ ಅತಿ ಹೆಚ್ಚು...

DENGUE CASE : ವೇಗವಾಗಿ ಹಬ್ಬುತ್ತಿದೆ ಡೆಂಘಿ ಜ್ವರ – ಐದು ವರ್ಷದಲ್ಲೇ ಅತಿ ಹೆಚ್ಚು ಪ್ರಕರಣ!

ಉತ್ತರ ಕನ್ನಡದಲ್ಲಿ ಮುಂಗಾರು ಅಬ್ಬರದ ಬೆನ್ನಲ್ಲೇ ಡೆಂಗ್ಯೂ ಕಾಟ ಕೂಡ ಜೋರಾಗಿದ್ದು, ಕಳೆದ ಐದು ವರ್ಷಗಳ ಪೈಕಿ ಪ್ರಸಕ್ತ ಸಾಲಿನಲ್ಲಿಯೇ ಅತ್ಯಂತ ವೇಗವಾಗಿ ಉಲ್ಬಣಗೊಳ್ಳುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ನೂರು ತಲುಪಿದ್ದು, ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಜನವರಿಯಿಂದ ಜೂನ್​ವರೆಗೆ 1,164 ಶಂಕಿತ ಪ್ರಕರಣಗಳು ಕಂಡು ಬಂದಿದೆ.

ಪ್ರತೀ ಮಳೆಗಾಲದ ವೇಳೆ ಹೆಚ್ಚಾಗಿ ಕಂಡು ಬರುವ ಈ ರೋಗ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಈ ಪೈಕಿ 996 ಜನರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 100 ಮಂದಿಯಲ್ಲಿ ಸೋಂಕು ಇರುವುದು ಧೃಡಪಟ್ಟಿದೆ.

ಮಾತ್ರವಲ್ಲದೇ ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಅತ್ಯಂತ ವೇಗವಾಗಿ ರೋಗ ಉಲ್ಬಣಗೊಳ್ಳುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಅಂಕೋಲಾ ಹಾಗೂ ಹೊನ್ನಾವರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಳೆಗಾಲ ಪೂರ್ವದಲ್ಲಿ ಶೇಖರಣೆಗೊಂಡ ನೀರಿನಲ್ಲಿ ಉತ್ಪತ್ತಿಯಾದ ಸೊಳ್ಳೆಗಳಿಂದಾಗಿ ಈ ರಿತಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಹೆಚ್ಚಿನ ಸುದ್ದಿ