Sunday, July 7, 2024
Homeಟಾಪ್ ನ್ಯೂಸ್Dengue Fever : ಕೈ ಜಾರುತ್ತಿದೆಯೇ ಡೆಂಗ್ಯೂ ನಿಯಂತ್ರಣ - ದಿನೇ ದಿನೇ ಹೆಚ್ಚುತ್ತಿರುವ...

Dengue Fever : ಕೈ ಜಾರುತ್ತಿದೆಯೇ ಡೆಂಗ್ಯೂ ನಿಯಂತ್ರಣ – ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣ!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಡಂಘೀ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ರಾಜ್ಯದಲ್ಲಿ 6290 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ೫ ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರು ಹೊರತು ಪಡಿಸಿ ರಾಜ್ಯದಲ್ಲಿ 4624 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಹತೋಟಿಗೆ ಸಿಗದೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದೆ.

ಏತನ್ಮಧ್ಯೆ ಸಾಮಾನ್ಯವಾಗಿ ಡೆಂಘೀ ಪೀಡಿತರಿಗೆ ಬಿಳಿರಕ್ತಕಣಗಳ ಸಂಖ್ಯೆ 10,000 ಕ್ಕಿಂತ ಕಡಿಮೆಯಾದವರಿಗೆ ಬಿಳಿ ರಕ್ತಕಣಗಳನ್ನು ನೀಡಬೇಕಾಗುತ್ತಿದೆ. ಆದರೆ ಹಲವು ಬ್ಲಡ್ ಬ್ಯಾಂಕ್ ಗಳಲ್ಲಿ ಬಿಳಿ ರಕ್ತಕಣಗಳ ಶೇಖರಣೆ ಕೊರತೆ ಕಂಡು ಬಂದಿದೆ‌. ಅಕಸ್ಮಾತ್ ನಿಯಂತ್ರಣ ತಪ್ಪಿ ಡೆಂಘೀ ಆರ್ಭಟಿಸಿದರೆ ಸಾವಿನ ಪ್ರಮಾಣ ಜಾಸಗತಿಯಾಗಬಹುದು ಎಂಭ ಭೀತಿ ಉಂಟಾಗಿದೆ.

ಹೆಚ್ಚಿನ ಸುದ್ದಿ