Sunday, July 7, 2024
Homeಟಾಪ್ ನ್ಯೂಸ್NASA: ಸುನೀತಾ ವಿಲಿಯಮ್ಸ್‌ ತಂಡ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು ಯಾಕೆ? ಇಲ್ಲಿದೆ ಮಾಹಿತಿ...

NASA: ಸುನೀತಾ ವಿಲಿಯಮ್ಸ್‌ ತಂಡ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು ಯಾಕೆ? ಇಲ್ಲಿದೆ ಮಾಹಿತಿ…

ನವದೆಹಲಿ: ತಾಂತ್ರಿಕ ಸಮಸ್ಯೆಯಿಂದಾಗಿ ನಾಸಾ (NASA) ಗಗನಯಾತ್ರಿಗಳಾದ ಭಾರತ ಮೂಲದ ಸುನೀತಾ ವಿಲಿಯಮ್ಸ್‌ (Sunita Williams) ಹಾಗೂ ಬುಚ್ ವಿಲ್ಮೋರ್ (Butch Wilmore) ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದಾರೆ.

ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಮತ್ತು ಅವರ ತಂಡ ತಾಂತ್ರಿಕ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಭೂಮಿಗೆ ಮರಳಬೇಕಿದ್ದ ಬೋಯಿಂಗ್ ಸ್ಟಾರ್‌ಲೈನರ್ (Boeing Starliner) ಅನ್ನು ತಾಂತ್ರಿಕ ಸಮಸ್ಯೆ ಕಾರಣ ನಾಸಾ ಮತ್ತೆ ಮುಂದೂಡಿದೆ. ಹೀಗಾಗಿಯೇ ಸುನೀತಾ ಭೂಮಿಗೆ ಮರಳುವುದು ತಡವಾಗಿದೆ.

ಈ ಹಿಂದೆ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ತಂಡ ಆರಂಭದಲ್ಲಿ ಜೂನ್ 14 ಕ್ಕೆ ವಾಪಸಾಗುತ್ತದೆ ಎಂದು ಹೇಳಲಾಗಿತ್ತು. ನಂತರ ಜೂನ್ 26ಕ್ಕೆ ಮುಂದೂಡಲಾಯಿತು. ಆದಾಗ್ಯೂ, ನಿಲ್ದಾಣವು ಎರಡು ಯೋಜಿತ ನಡಿಗೆಗಳನ್ನು ಜೂನ್ 24 ರಂದು ಮತ್ತು ಇನ್ನೊಂದು ಜುಲೈ 2 ರಂದು ನಡೆಯಬೇಕಾಗಿರುವುದರಿಂದ ಯೋಜನೆಯನ್ನು ಬದಲಾಯಿಸಲಾಗಿದೆ.

ಬೋಯಿಂಗ್ ವಕ್ತಾರರ ಪ್ರಕಾರ, ಈ ಹಿಂದೆ ಸ್ಥಗಿತಗೊಳ್ಳುತ್ತಿದ್ದ ಐದು ಥ್ರಸ್ಟರ್‌ಗಳಲ್ಲಿ 4 ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಕೇವಲ 27 ದಿನಗಳ ಇಂಧನ ಹೊಂದಿದ್ದು, ಅಷ್ಟರೊಳಗೆ ತಾಂತ್ರಿಕ ಸಮಸ್ಯೆ ನಿವಾರಿಸಬೇಕಾಗಿದೆ ಎಂದಿದೆ.

ಹೆಚ್ಚಿನ ಸುದ್ದಿ