Sunday, July 7, 2024
Homeಲೈಫ್ ಸ್ಟೈಲ್Snacks Recipe: ಶಾಲೆಯಿಂದ ಬಂದು ಹಸಿವು ಅನ್ನೋ ಮಕ್ಕಳಿಗೆ ಮಾಡಿಕೊಡಿ ದಾವಣಗೆರೆ ಸ್ಪೆಷಲ್‌ ನರ್ಗಿಸ್‌ ಮಂಡಕ್ಕಿ

Snacks Recipe: ಶಾಲೆಯಿಂದ ಬಂದು ಹಸಿವು ಅನ್ನೋ ಮಕ್ಕಳಿಗೆ ಮಾಡಿಕೊಡಿ ದಾವಣಗೆರೆ ಸ್ಪೆಷಲ್‌ ನರ್ಗಿಸ್‌ ಮಂಡಕ್ಕಿ

ಸಾಮಾನ್ಯವಾಗಿ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ತಿಂಡಿ ಬಹಳ ಫೇಮಸ್‌ ಆಗಿರುತ್ತದೆ. ಮೈಸೂರು ಮಸಾಲೆ ದೋಸೆ, ಮದ್ದೂರು ವಡೆ, ಬಿಡದಿ ತಟ್ಟೆ ಇಡ್ಲಿ, ಬೆಳಗಾಂ ಕುಂದಾ..ಹೀಗೆ ವಿವಿಧ ರೀತಿಯ ರುಚಿಯಿರುವ ತಿಂಡಿ ಬಹಳ ಫೇಮಸ್‌ ಆಗಿರುತ್ತದೆ.

ದಾವಣಗೆರೆ ಎಂದರೆ ನೆನಪಾಗುವುದು ಬೆಣ್ಣೆ ದೋಸೆ, ಆದರೆ ದಾವಣಗೆರೆಯಲ್ಲಿ ನರ್ಗಿಸ್‌ ಮಂಡಕ್ಕಿ ಕೂಡಾ ಬಹಳ ಫೇಮಸ್. ಸಂಜೆಯ ಸ್ನಾಕ್ಸ್‌ಗೆ ಬಹಳ ಸುಲಭವಾಗಿ ಮಾಡಬಹುದಾದಂತ ರೆಸಿಪಿ ಇದು.

ಬೇಕಾಗುವ ಸಾಮಗ್ರಿಗಳು

ಮಂಡಕ್ಕಿ – 3 ಕಪ್‌

ಹುರಿಗಡಲೆ – 3 ಟೇಬಲ್‌ ಸ್ಪೂನ್‌

ಸಕ್ಕರೆ – 2 ಟೇಬಲ್‌ ಸ್ಪೂನ್‌

ಜೀರ್ಗೆ – 1 ಟೇಬಲ್‌ ಸ್ಪೂನ್‌

ಹಿಂಗು – 1/2 ಸ್ಪೂನ್‌

ಹಸಿಮೆಣಸಿನ ಕಾಯಿ – 4

ಕರಿಬೇವು – 1ಎಸಳು

ಅರಿಶಿನ – 1 ಟೀ ಸ್ಪೂನ್‌

ಸಾಸಿವೆ – ಒಗ್ಗರಣೆಗೆ

ಕಡ್ಲೆಕಾಯಿ ಬೀಜ – 2 ಟೇಬಲ್‌ ಸ್ಪೂನ್‌

ಹುರಿಗಡಲೆ – 1 ಟೇಬಲ್‌ ಸ್ಪೂನ್‌

ಈರುಳ್ಳಿ – 2

ಕೊತ್ತಂಬರಿ ಸೊಪ್ಪು -1/2 ಕಟ್ಟು

ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಒಂದು ಜಾರ್‌ಗೆ ಹುರಿಗಡಲೆ, ಸಕ್ಕರೆ, ಜೀರ್ಗೆ, ಹಿಂಗು ಸೇರಿಸಿ ಪುಡಿ ಮಾಡಿಕೊಳ್ಳಿ.

ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಉದ್ದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಒಗ್ಗರಣೆ ಹಾಕಿ ನೀರಿನ ಅಂಶ ಹೋಗುವರೆಗೂ 4-5 ನಿಮಿಷ ಹುರಿಯಿರಿ.

ಇದರೊಂದಿಗೆ ಅರಿಶಿನ, ಕಡ್ಲೆಕಾಯಿ ಬೀಜ, ಹುರಿಗಡಲೆ, ಮಂಡಕ್ಕಿ ಸೇರಿಸಿ ಮಿಕ್ಸ್‌ ಮಾಡಿ.

ನಂತರ ಮೊದಲೇ ತಯಾರಿಸಿಕೊಂಡ ಪುಡಿ ಸೇರಿಸಿ ಮತ್ತೆ ಮಿಕ್ಸ್‌ ಮಾಡಿ, ಅವಶ್ಯಕತೆ ಇದ್ದರೆ ಉಪ್ಪು ಸೇರಿಸಿ 2-3 ನಿಮಿಷ ಹುರಿದು ಸ್ಟೋಫ್‌ ಆಫ್‌ ಮಾಡಿ.

ಒಂದು ಪ್ಲೇಟ್‌ಗೆ ಮಂಡಕ್ಕಿ ವರ್ಗಾಯಿಸಿ, ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ತಿನ್ನಬಹುದು.

ಇದನ್ನು ಏರ್‌ ಟೈಟ್‌ ಬಾಕ್ಸ್‌ನಲ್ಲಿ ಸುಮಾರು 15 ದಿನಗಳ ಕಾಲ ಸಂಗ್ರಹಿಸಿಡಬಹುದು.

ಗಮನಿಸಿ: ಹಿಂಗು ಬದಲಿಗೆ ಬೆಳ್ಳುಳ್ಳಿ ಬಳಸಬಹುದು. ಆದರೆ ಅದರನ್ನು ಪುಡಿ ಮಾಡುವ ಬದಲಿಗೆ ಒಗ್ಗರಣೆಗೆ ಬಳಸಿ

 

ಹೆಚ್ಚಿನ ಸುದ್ದಿ