Sunday, July 7, 2024
Homeಟಾಪ್ ನ್ಯೂಸ್DAVANAGERE : ಹೇಳೋರಿಲ್ಲ.. ಕೇಳೋರಿಲ್ಲ..! : ಶಾಸಕರ ಬರ್ತಡೇಗೆ ಸರ್ಕಾರಿ ನೌಕರ ಸಾಮೂಹಿಕ ರಜೆ!

DAVANAGERE : ಹೇಳೋರಿಲ್ಲ.. ಕೇಳೋರಿಲ್ಲ..! : ಶಾಸಕರ ಬರ್ತಡೇಗೆ ಸರ್ಕಾರಿ ನೌಕರ ಸಾಮೂಹಿಕ ರಜೆ!

ದಾವಣಗೆರೆ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಲಾಗುತ್ತದೆ. ಆದರೆ ಸರ್ಕಾರಿ ನೌಕರರು ಸಾರ್ಜಜನಿಕರ ಸೇವೆ ಮಾಡುವುದು ಬಿಟ್ಟು ಜನಪ್ರತಿನಿಧಿಗಳ ಸೇವೆ ಮಾಡುತ್ತಿರುವುದಕ್ಕೆ ದಾವಣಗೆರೆ ಜಿಲ್ಲೆಯ ಅಧಿಕಾರಿಗಳೇ ಸಾಕ್ಷಿ.

ಹೌದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸರ್ಕಾರಿ ಅಧಿಕಾರಿಗಳು ಶಾಸಕ ಶಿವಗಂಗಾ ಬಸವರಾಜ್ ಜನ್ಮದಿನ ಆಚರಿಸಲು ಸಾಮೂಹಿಕವಾಗಿ ರಜೆ ತೆಗೆದುಕೊಂಡು ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ.

ಶಾಸಕ ಬಸವರಾಜ್ ಶಿವಗಂಗಾ ಜನ್ಮ ದಿನ ಆಚರಿಸಲು 20ಕ್ಕೂ ಹೆಚ್ಚು ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳು ಸಾಮೂಹಿಕವಾಗಿ ರಜೆ ತೆಗೆದುಕೊಂಡು ತಿರುಪತಿಗೆ ತೆರಳಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಸರ್ಕಾರಿ ನೌಕರರು ತಿರುಪತಿಗೆ ಹೋಗಿ ಶಾಸಕರ ಹೆಸರಿನಲ್ಲಿ ಪೂಜೆ ಮಾಡಿಸುತ್ತಿಲ್ಲ. ಬದಲಾಗಿ ಶುಕ್ರವಾರ ಶಾಸಕರ ಜನ್ಮದಿನದಂದು ತಿರುಪತಿ ಸಮೀಪದ ರೆಸಾರ್ಟೊಂದರಲ್ಲಿ ಪಾರ್ಟಿ ಮಾಡಲಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕಾಗಿ ಶಕ್ರವಾರದಿಂದ ಎರಡು ದಿನ ರಜೆ ಹಾಕಿದ್ದು, ಭಾನುವಾರ ರಜಾ ದಿನವಾಗಿದ್ದರಿಂದ ಒಟ್ಟಾರೆ ಮೂರು ದಿನ ರಜೆಯ ಮೋಜು ಸವಿದು ಸೋಮವಾರ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸರ್ಕಾರಿ ಅಧಿಕಾರಿಗಳು ಎರಡು ದಿನ ಸೇವೆಯಲ್ಲಿ ಇಲ್ಲದ ಕಾರಣ ಸಾರ್ವಜನಿಕರು 2 ದಿನ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಾ ಶಾಪ ಹಾಕುವಂತಾಗಿದೆ.

ಅಧಿಕಾರಿಗಳು ರಜೆ ಪಡೆಯುವುದು ಅವರ ಹಕ್ಕು. ಆದರೆ ವೈಯಕ್ತಿಕ ಕಾರಣಗಳಿಗಾಗಿ ರಜೆ ಪಡೆಯುವುದು ಸರಿ. ಆದರೆ ಶಾಸಕರ ಬರ್ತಡೆಗಾಗಿ ಮೋಜು ಮಾಡಲು ಸಾಮೂಹಿಕವಾಗಿ ರಜೆ ಹಾಕುವುದು ಎಷ್ಟು ಸರಿ? ಈ ರೀತಿ ಸಾಮೂಹಿಕವಾಗಿ ರಜೆ ಪಡೆದು ಸಾರ್ವಜನಿಕರಿಗೆ ತೊಂದರೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ರೈತ ಮುಖಂಡ ಹಾಗೂ ಮಾಜಿ ಸಿಎಂ ಪುತ್ರ ತೇಜಸ್ವಿ ಪಾಟೀಲ್ ಪತ್ರ ಬರೆದಿದ್ದಾರೆ.

ಹೆಚ್ಚಿನ ಸುದ್ದಿ