Sunday, July 7, 2024
Homeಟಾಪ್ ನ್ಯೂಸ್Darshan Fans: ಮಗುವಿಗೆ ಖೈದಿ 6106 ಫೋಟೋ ಶೂಟ್‌ ಮಾಡಿದ ಪೋಷಕರಿಗೆ ಸಂಕಷ್ಟ!

Darshan Fans: ಮಗುವಿಗೆ ಖೈದಿ 6106 ಫೋಟೋ ಶೂಟ್‌ ಮಾಡಿದ ಪೋಷಕರಿಗೆ ಸಂಕಷ್ಟ!

ಬೆಂಗಳೂರು: ಮಗುವಿಗೆ ಖೈದಿ 6106 ಫೋಟೋಶೂಟ್‌ ಮಾಡಿದ ಘಟನೆಗೆ ಸಂಬಂಧ ಪಟ್ಟಂತೆ ಮಗುವಿನ ಪೋಷಕರಿಗೆ ಇದೀ ಸಂಕಷ್ಟ ಎದುರಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆರೋಗ ಪೋಷಕರ ವಿರುದ್ಧ ಕೇಸ್‌ ದಾಖಲಿಸಲು ಸಿದ್ಧತೆ ನಡೆಸಿದೆ.

ಅಭಿಮಾನದ ಅತಿರೇಕ ತೋರಿ ದರ್ಶನ್‌ ಫ್ಯಾನ್ಸ್‌ ಮಗುವಿಗೆ ಖೈದಿಯ ಬಟ್ಟೆ ತೊಡಿಸಿ 6106 ನಂಬರ್‌ ಬರೆದು ಫೋಟೋಶೂಟ್‌ ಮಾಡಿದ್ದರು. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಮಾತ್ರವಲ್ಲದೇ ಟೀಕೆಗೂ ಗುರಿಯಾಗಿತ್ತು. ಇದೀಗ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಮಕ್ಕಳ ಹಕ್ಕುಗಳ ರಕ್ಷಣಾ ಆರೋಗ ಕೇಸ್‌ ದಾಖಲಿಸಲು ಮುಂದಾಗಿದೆ.

ಮಗುವಿನ ಫೋಟೋಶೂಟ್‌ ಮಾಡಿದ ಪೋಷಕರು ಎಲ್ಲಿಯವರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಆಯೋಗ ಸೈಬರ್‌ ಪೊಲೀಸರಿಂದ ಮಾಹಿತಿ ಕೇಳಿದೆ. ಮಾಹಿತಿ ಸಿಕ್ಕ ಕೂಡಲೆ ನೋಟಿಸ್‌ ಕೊಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಆಯೋಗದ ಸದಸ್ಯ ಶಶಿಧರ್‌ ಕೊಸಂಬೆ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸುದ್ದಿ