Sunday, July 7, 2024
Homeಟಾಪ್ ನ್ಯೂಸ್VIRAL NEWS : ಮಳೆಯ ನಡುವೆ ರಸ್ತೆಯಲ್ಲಿ  ಪ್ರತ್ಯಕ್ಷವಾದ ದೈತ್ಯ ಮೊಸಳೆ

VIRAL NEWS : ಮಳೆಯ ನಡುವೆ ರಸ್ತೆಯಲ್ಲಿ  ಪ್ರತ್ಯಕ್ಷವಾದ ದೈತ್ಯ ಮೊಸಳೆ

ಮುಂಬಯಿ: ಮಹಾರಾಷ್ಟ್ರದ  ಮುಖ್ಯ ರಸ್ತೆಯಲ್ಲಿ ದೈತ್ಯ ಮೊಸಳೆಯೊಂದು ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಘಟನೆ ನಡೆದಿದೆ

ರತ್ನಗಿರಿ ಜಿಲ್ಲೆಯ ಚಿಪ್ಲುನ್ ಮತ್ತು ಇತರ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ಸಮೀಪದ ಶಿವನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳಿದ್ದು, ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಮೊಸಳೆ ರಸ್ತೆಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿರುವ ನಡುವೆಯೇ ದೈತ್ಯ ಮೊಸಳೆ ನಡು ರಸ್ತೆಯಲ್ಲಿ ಬರುತ್ತಿರುವುದನ್ನು ಅಲ್ಲಿರುವ ಜನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ

ರಸ್ತೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಸುದ್ದಿ ಹರಡುತ್ತಿದ್ದಂತೆ ಇಲ್ಲಿನ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ, ಆದರೆ ಇಲ್ಲಿನ ನಿವಾಸಿಗಳು ಹೇಳುವಂತೆ ಮೊಸಳೆಗಳು ಕಾಣಸಿಗುವುದು ಇದು ಮೊದಲೇನಲ್ಲ ಮಳೆಗಾಲ ಬಂದರೆ ಸಾಕು ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ ಕೂಡಲೇ ನದಿಯಿಂದ ಮೊಸಳೆಗಳು ರಸ್ತೆಗೆ ಬರುತ್ತವೆ ಹಾಗೆಯೆ ಈ ಬಾರಿಯೂ ಬಂದಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ