Sunday, July 7, 2024
Homeಲೈಫ್ ಸ್ಟೈಲ್SNACKS: ಸ್ವೀಟ್‌ ಕಾರ್ನ್ ಇಷ್ಟಪಡ್ತೀರಾ? ಹಾಗಾದ್ರೆ ಈ ಪ್ಯಾನ್‌ಕೇಕ್‌ ಮಾಡಿ ನೋಡಿ...

SNACKS: ಸ್ವೀಟ್‌ ಕಾರ್ನ್ ಇಷ್ಟಪಡ್ತೀರಾ? ಹಾಗಾದ್ರೆ ಈ ಪ್ಯಾನ್‌ಕೇಕ್‌ ಮಾಡಿ ನೋಡಿ…

ಚುಮುಚುಮು ಚಳಿಗೆ ಚಹಾದೊಂದಿಗೆ ಬಿಸಿಬಿಸಿಯಾಗಿ ಕಾರ್ನ್ ಪ್ಯಾನ್‌ಕೇಕ್‌ (corn pancake) ರೆಸಿಪಿ ಟ್ರೈ ಮಾಡಿ. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಮಕ್ಕಳು ಕೂಡಾ ಇಷ್ಟಪಡುತ್ತಾರೆ. ಇದನ್ನ ಕೇವಲ ಸ್ನ್ಯಾಕ್ಸ್‌ಗಷ್ಟೇ ಅಲ್ಲ ಬೆಳಗ್ಗೆ ಉಪಹಾರಕ್ಕೂ ಉಪಯೋಗಿಸಬಹುದು. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ…

ಬೇಕಾಗುವ ಸಾಮಾಗ್ರಿಗಳು:
ಸ್ವೀಟ್‌ ಕಾರ್ನ್ 3/4 ಕಪ್
ಸೂಜಿ ರವಾ 1 ಕಪ್
ಕಡಲೆ ಹಿಟ್ಟು 2 ಟೇಬಲ್‌ ಸ್ಪೂನ್
ಅರಿಶಿನ 1/4 ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ 1/2 ಟೀಸ್ಪೂನ್
ಉಪ್ಪು 1/2 ಟೀಸ್ಪೂನ್
ನೀರು 1 ಕಪ್
ಕ್ಯಾರೆಟ್ (ಸಣ್ಣಗೆ ಕತ್ತರಿಸಿದ) 1
ಕ್ಯಾಪ್ಸಿಕಂ (ಸಣ್ಣಗೆ ಕತ್ತರಿಸಿದ) 2 ಟೇಬಲ್‌ ಸ್ಪೂನ್
ಸ್ಪ್ರಿಂಗ್ ಈರುಳ್ಳಿ (ಕತ್ತರಿಸಿದ) 3 ಟೇಬಲ್‌ ಸ್ಪೂನ್‌
ಇನೋ 1/2 ಟೀಸ್ಪೂನ್‌
ಎಣ್ಣೆ

ಮಾಡುವ ವಿಧಾನ:
ಮೊದಲಿಗೆ ಮಿಕ್ಸಿ ಜಾರ್‌ನಲ್ಲಿ ಸ್ವೀಟ್‌ ಕಾರ್ನ್ ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಅದಾದ ಬಳಿಕ ಆ ಕಾರ್ನ್ ಪೇಸ್ಟ್ ಅನ್ನು ದೊಡ್ಡ ಬಟ್ಟಲಿನಲ್ಲಿ ವರ್ಗಾಯಿಸಿ.

ಬಳಿಕ ಅದೇ ಬಟ್ಟಲಿಗೆ ರವಾ, ಕಡಲೆ ಹಿಟ್ಟು, ಅರಿಶಿನ, ಚಿಲ್ಲಿ ಫ್ಲೇಕ್ಸ್ ಮತ್ತು ಉಪ್ಪು ಸೇರಿಸಿ.

ನಂತರ ಸ್ವಲ್ಪ ನೀರನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಕಲಸಿ. ಅದಾದ ಬಳಿಕ ಆ ಹಿಟ್ಟನ್ನು 10 ನಿಮಿಷಗಳ ಕಾಲ ಹಾಗೆ ಬಿಡಿ

ಈಗ ಅದೇ ಬಟ್ಟಲಿಗೆ ಸ್ವೀಟ್‌ ಕಾರ್ನ್, ಕ್ಯಾರೆಟ್, ಕ್ಯಾಪ್ಸಿಕಮ್ ಮತ್ತು ಸ್ಪ್ರಿಂಗ್ ಈರುಳ್ಳಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಇನೋ ಮತ್ತು ಸ್ವಲ್ಪ ನೀರು ಸೇರಿಸಿ.

ಬಳಿಕ ಒಂದು ಪ್ಯಾನ್‌ಗೆ ಎಣ್ಣೆ ಸವರಿ ಅದಕ್ಕೆ ಕಾರ್ನ್ ಮಿಶ್ರಣವನ್ನು ಅನ್ನು ಚೆನ್ನಾಗಿ ಹರಡಿ

ಅದಾದ ಬಳಿಕ ಒಂದು ಪ್ಲೇಟ್‌ ಅನ್ನು ಮುಚ್ಚಿ 2-3 ನಿಮಿಷಗಳ ಕಾಲ ಸಣ್ಣ ಊರಿಯಲ್ಲಿ ಹಾಗೇ ಇಡಿ. ಗೋಲ್ಡನ್ ಬ್ರೌನ್‌ಗೆ ತಿರುಗುವವರೆಗೂ ಎರಡೂ ಬದಿಗಳನ್ನು ರೋಸ್ಟ್ ಮಾಡಿ. ನಂತರ ಚಟ್ನಿಯೊಂದಿಗೆ ಬಿಸಿಬಿಸಿ ತಿನ್ನಲು ಕೊಡಿ.

ಹೆಚ್ಚಿನ ಸುದ್ದಿ