Sunday, July 7, 2024
Homeಕ್ರೈಂVIRAL NEWS : ಪಠ್ಯದಲ್ಲಿ ತಮನ್ನಾ ಬಗ್ಗೆ ಪಾಠ : ಜಾತಿ ಪ್ರೇಮ ಮೆರೆಯಿತಾ ಶಾಲೆ.?!

VIRAL NEWS : ಪಠ್ಯದಲ್ಲಿ ತಮನ್ನಾ ಬಗ್ಗೆ ಪಾಠ : ಜಾತಿ ಪ್ರೇಮ ಮೆರೆಯಿತಾ ಶಾಲೆ.?!

ಬೆಂಗಳೂರು: ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಶಾಲೆಯ ಪಠ್ಯವೊಂದರಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತಾದ ಪಠ್ಯವೊಂದನ್ನು ಅಳವಡಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಸಿಂಧಿ ವಿಭಜನೆಯ ನಂತರ ಭಾರತೀಯರ ಜನಜೀವನ ಎಂಬ ವಿಷಯದಡಿ ತಮನ್ನಾ ಭಾಟಿಯಾ ಅವರ ಪಠ್ಯವನ್ನು ಅಳವಡಿಸಲಾಗಿದೆ. ಅದನ್ನೇ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗಿದೆ ಎನ್ನಲಾಗಿದೆ. 

 ಶಾಲೆಯ 7ನೇ ತರಗತಿಯ ಪಠ್ಯದಲ್ಲಿ ತಮನ್ನಾ ಪಾಠವನ್ನು ಅಳವಡಿಸಲಾಗಿದ್ದು, ಸಿಂಧಿ ಸಮುದಾಯ ಸಾಧಕರ ಪರಿಚಯಿಸಲು ಹೋಗಿ ಎಡವಟ್ಟು ಮಾಡಿದ್ದಾರೆ ಎನ್ನಲಾಗುತ್ತಿದೆ. ನಟಿ ಮಾಡಿದ ಸಿನಿಮಾಗಳ ಬಗ್ಗೆ ಹಾಗೂ ತೆಲುಗು, ತಮಿಳಿನಲ್ಲಿ ಅವರು ಅಭಿನಯಿಸಿರುವ ಬಗ್ಗೆ ಪಠ್ಯದಲ್ಲಿ ನೀಡಲಾಗಿದೆ.

ತಮನ್ನಾ ಪಠ್ಯ ಅಳವಡಿಕೆಗೆ ಪೋಷಕರಿಂದ ವಿರೋಧ ವ್ಯಕ್ತವಾಗುತ್ತಾ ಇದೆ. ನಮ್ಮ ಮಕ್ಕಳು ಇದನ್ನು ಕಲಿಬೇಕಾ ಎಂದು ಪಾಲಕರು ಪ್ರಶ್ನೆ ಮಾಡುತ್ತ ಇದ್ದಾರೆ. ಮಕ್ಕಳಿಗೆ ಇತರದ ನಟಿಯಿಂದ ಕಲಿಕೆ ಏನು..? ಎಂದು ಪ್ರಶ್ನೆ ಮಾಡಿದ್ದಾರೆ.

ತಮನ್ನಾ ಪೋರ್ನ್ ಮಾದರಿಯ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಮಕ್ಕಳು ಈ ಬಗ್ಗೆ ಪ್ರಶ್ನೆ ಮಾಡ್ತಾ ಇದ್ದಾರೆ ಅಂತಾ ಆರೋಪ ಕೇಳಿಬಂದಿದೆ. ಆಡಳಿತ ಮಂಡಳಿಯನ್ನ ಈ ಬಗ್ಗೆ ಪ್ರಶ್ನೆ ಮಾಡಿದ್ರೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. 

ಹೆಚ್ಚಿನ ಸುದ್ದಿ