Sunday, July 7, 2024
Homeಚುನಾವಣೆ 2023LOK SABHA ELECTION : ನಕಲಿ ಮತದಾನ ಆರೋಪ ; ಹೊರ ನಡೆದ ಕಾಂಗ್ರೆಸ್...

LOK SABHA ELECTION : ನಕಲಿ ಮತದಾನ ಆರೋಪ ; ಹೊರ ನಡೆದ ಕಾಂಗ್ರೆಸ್ ಏಜೆಂಟ್

ಹಾಸನ : ನಕಲಿ ಮತದಾನ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಬೂತ್ ಏಜೆಂಟ್ ಹೊರ ನಡೆದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 151 ರಲ್ಲಿ ನಕಲಿ ಮತದಾನಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಏಜೆಂಟ್ ರಾಘವೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗಮಿಸುವ ವೇಳೆ ಮತಗಟ್ಟೆ ಅಧಿಕಾರಿಯೊಂದಿಗೆ ರಾಘವೇಂದ್ರ ವಾಗ್ವಾದ ನಡೆಸಿದ್ದು, ಅಧಿಕಾರಿಗಳು ಎಷ್ಟೇ ಮನವಿ ಮಾಡಿದರು ಸಮಾಧಾನಗೊಳ್ಳದೇ ಮತಗಟ್ಟೆ ಕೇಂದ್ರದಿಂದ ಹೊರ ನಡೆದಿದ್ದಾರೆ.

ಹೆಚ್ಚಿನ ಸುದ್ದಿ