Sunday, July 7, 2024
Homeಟಾಪ್ ನ್ಯೂಸ್VIRAL NEWS: ಮಲಗಿದ್ದ ಯುವಕನ ಚಡ್ಡಿಯೊಳಗಿತ್ತು ನಾಗರಹಾವು... ಮುಂದೇನಾಯ್ತು ನೋಡಿ...: ವಿಡಿಯೋ

VIRAL NEWS: ಮಲಗಿದ್ದ ಯುವಕನ ಚಡ್ಡಿಯೊಳಗಿತ್ತು ನಾಗರಹಾವು… ಮುಂದೇನಾಯ್ತು ನೋಡಿ…: ವಿಡಿಯೋ

ಥಾಯ್ಲೆಂಡ್‌: ಮಲಗಿದ್ದ ಯುವಕನೊಬ್ಬನ ಚಡ್ಡಿಯೊಳಗೆ ನಾಗರಹಾವೊಂದು (cobra) ನುಗ್ಗಿದ ಘಟನೆ ಥಾಯ್ಲೆಂಡ್‌ನಲ್ಲಿ (Thailand) ನಡೆದಿದೆ.

ಯುವಕನೊಬ್ಬ ರಾತ್ರಿ ಮಲಗಿದ್ದಾಗ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ (ಶಾರ್ಟ್ಸ್)‌ ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಯುವಕನ ಚಡ್ಡಿಯೊಳಗೆ ಬೆಚ್ಚಗೆ ಮಲಗಿದೆ. ಯುವಕನೂ ಮಲಗಿದ್ದಾನೆ. ಆದರೆ, ಬೆಳಗ್ಗೆ ಏಳುತ್ತಲೇ ಯುವಕನಿಗೆ ತನ್ನ ಚಡ್ಡಿಯೊಳಗೆ ಏನೂ ನುಸುಳಿದ, ಅಲುಗಾಡಿದ ಅನುಭವವಾಗಿದೆ.

ಅಪಾಯದ ಮುನ್ಸೂಚನೆ ಅರಿತ ಯುವಕನು ಅಲುಗಾಡದೆ ಚಡ್ಡಿಯೊಳಗೆ ಏನಿದೆ ಎಂಬುದನ್ನು ನೋಡಿದ್ದಾನೆ. ಆಗ ನಾಗರಹಾವು ಕಂಡ ಆತನಿಗೆ ಆಘಾತವಾಗಿದೆ. ಸ್ವಲ್ಪ ಅಲುಗಾಡಿದೇ ಆತ ಗೆಳೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸುದ್ದಿ ತಿಳಿದ ಗೆಳೆಯರು ಕೂಡಲೇ ಸ್ಥಳೀಯ ಉರಗ ತಜ್ಞರನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ.

ಯುವಕನ ಮನೆಗೆ ಬಂದ ಉರಗ ತಜ್ಞ ಯುವಕನ ಚಡ್ಡಿಯಿಂದ ನಿಧಾನವಾಗಿ ಹಾವನ್ನು ಹೊರತೆಗೆದಿದ್ದಾರೆ. ಈ ವಿಡಿಯೊ ಈಗ ಭಾರೀ ವೈರಲ್‌ ಆಗಿದೆ.

 

View this post on Instagram

 

A post shared by FOLKMEDIA ALTERNATIVE (@unikinfold)

ಹೆಚ್ಚಿನ ಸುದ್ದಿ