Sunday, July 7, 2024
Homeಟಾಪ್ ನ್ಯೂಸ್MUDA SCAM : ಪಾರ್ವತಿ ಸಿದ್ದರಾಮಯ್ಯ ಜಮೀನು ಬೆಲೆ 55 ಕೋಟಿ , ಮುಡಾ ಕೊಟ್ಟಿದ್ದು...

MUDA SCAM : ಪಾರ್ವತಿ ಸಿದ್ದರಾಮಯ್ಯ ಜಮೀನು ಬೆಲೆ 55 ಕೋಟಿ , ಮುಡಾ ಕೊಟ್ಟಿದ್ದು 15 ಕೋಟಿ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಂದ ಪಡೆದಿರುವುದು 55 ಕೋಟಿ ರೂಪಾಯಿ ಮೌಲ್ಯದ 3 ಎಕರೆ 16 ಗುಂಟೆ ಜಮೀನು. ಆದರೆ ಅವರಿಗೆ ನೀಡಿರುವುದು 15 ರಿಂದ 16 ಕೋಟಿ ರೂ. ಮೌಲ್ಯದ ಜಮೀನು ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದ್ದಾರೆ.

ಹೀಗಿರುವಾಗ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ, ಸಿಎಂ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾಗಿ ಸೈಟ್‌ಗಳ ಹಂಚಿಕೆಯಾಗಿದೆ ಎಂದು ಪ್ರತಿಪಕ್ಷದವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಮೈಸೂರು ನಗರ ಹೊರ ವರ್ತುಲ ರಸ್ತೆ (ರಿಂಗ್ ರೋಡ್) ಪಕ್ಕದಲ್ಲಿದ್ದ ಈ ಜಮೀನು ಅಂದು ಖಾಲಿ ‌ಜಾಗವಾಗಿತ್ತು. ಅದನ್ನು ಮುಡಾದವರು ವಶಕ್ಕೆ ಪಡೆದುಕೊಂಡು ಕಾಮಗಾರಿ ಆರಂಭಿಸಿದ್ದರು. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ತಮ್ಮ ಜಾಗದಲ್ಲಿ ಕಾಮಗಾರಿ ಸ್ಥಗಿತ ಮಾಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಮುಡಾದವರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದ್ದರು.

ಅದರಂತೆ ಪಾರ್ವತಿ ಅವರು ಪರಿಹಾರ ಕೊಡಿ ಎಂದು ಮುಡಾಗೆ ಮನವಿ ಸಲ್ಲಿದ್ದರಿಂದ ಮುಡಾ ವತಿಯಿಂದ ಪಾರ್ವತಿ ಅವರಿಗೆ ಪ್ರತ್ಯೇಕವಾಗಿ ಜಮೀನು ನೀಡಲಾಗಿದೆ. ಹಣದ ಬದಲಿಯಾಗಿ 50:50 ನಿಯಮದ ಅಡಿಯಲ್ಲಿ ಕಡಿಮೆ ಜಮೀನು ಕೊಟ್ಟಿದ್ದಾರೆ. ಪಾರ್ವತಿಯವರು  ಕಳೆದುಕೊಂಡಿರುವ ಜಮೀನಿನ ಮೌಲ್ಯ 55 ಕೋಟಿ ರೂ. ಆಗಿದ್ದರೆ, ಸಿಕ್ಕಿರುವ ಜಮೀನಿನ ಮೌಲ್ಯ 15 ರಿಂದ 16 ಕೋಟಿ ರೂ. ಅಷ್ಟೇ. ಪಾವರ್ತಿಯವರು ಒಪ್ಪದೆ  ಕೋರ್ಟ್ ಗೆ ಹೋಗಿ ಅವರ 3.16 ಎಕರೆ ಜಮೀನು ಪಡೆದುಕೊಳ್ಳಬಹುದಿತ್ತು. ಆದರೆ ಸುಮ್ಮನಾಗಿದ್ದರು ಎಂದು ಸ್ಪಷ್ಟವಾಗಿ ಮಾಹಿತಿ ನೀಡುವ ಮೂಲಕ ಮೂಡಾ ಹಗರಣ ಸಂಬಂಧ ಸಿಎಂ ವಿರುದ್ಧ ಪ್ರತಿಪಕ್ಷಗಳು ಹೊರಿಸಿರುವ ಆರೋಪಗಳನ್ನು ಪೊನ್ನಣ್ಣ ತಳ್ಳಿ ಹಾಕಿದ್ದಾರೆ.

ಹೆಚ್ಚಿನ ಸುದ್ದಿ