Sunday, July 7, 2024
Homeಟಾಪ್ ನ್ಯೂಸ್CM Post Controversy : ಸ್ವಾಮೀಜಿಗಳ ಪಟ್ಟಕ್ಕೂ ಚುನಾವಣೆ ನಡೆಯಲಿ-ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್

CM Post Controversy : ಸ್ವಾಮೀಜಿಗಳ ಪಟ್ಟಕ್ಕೂ ಚುನಾವಣೆ ನಡೆಯಲಿ-ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತಾಗಿ ವಿವಿಧ ಸಮುದಾಯಗಳ ಸ್ವಾಮೀಜಿಗಳು ತಮ್ಮ ಸಮುದಾಯ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ.


ಇದರ ನಡುವೆಯೇ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ಅವರೂ ರಾಜಕೀಯ ವಿಚಾರಕ್ಕೆ ಎಂಟ್ರಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ವಾಮೀಜಿಗಳು ರಾಜಕೀಯ ಮಾಡುವುದಾದರೆ, ಆ ಸ್ವಾಮೀಜಿ ಪಟ್ಟಕ್ಕೂ ಚುನಾವಣೆ ನಡೆಸುವುದು ಒಳಿತಲ್ಲವೇ ಎಂದು ಪ್ರಶ್ನಿಸಿದ್ದಾರೆ. ಗುರು ಕಿರಣ್ ಅವರ ಪೋಸ್ಟ್​​ಗೆ ಕೆಲವರು ನಿಮ್ಮ ಪ್ರಶ್ನೆ ಸರಿಯಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.  ಇನ್ನು ಸ್ವಾಮೀಜಿಗಳು  ಗೋಡಂಬಿ ದ್ರಾಕ್ಷಿ ತಿಂದುಕೊಂಡು ಆರಾಮವಾಗಿರಲಿ..ರಾಜಕಾರಣ ವಿಚಾರ ಅವರಿಗೇಕೆ ಎಂದು ಕಮೆಂಟಿಸುತ್ತಿದ್ದಾರೆ.

ಈ ಬಗ್ಗೆ ಸ್ವಾಮೀಜಿಗಳು ತಮ್ಮ ಅಭಿಪ್ರಾಯಗಳನ್ನು ಹೇಳಲಿ, ಆದರೆ ಯಾವುದೇ ಒಂದು ಪಕ್ಷಕ್ಕೆ ಅದರದೇ ಆದ ಹೈಕಮಾಂಡ್, ಶಾಸಕರ ಒಮ್ಮತದಿಂದ ಸಿಎಂ ಮಾಡಲಾಗುತ್ತದೆ. ಸ್ವಾಮೀಜಿಗಳು ಹೇಳಿದ ಕೂಡಲೇ ಸಿಎಂ ಬದಲಾವಣೆ ಮಾಡಲಾಗದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಹೆಚ್ಚಿನ ಸುದ್ದಿ