Sunday, July 7, 2024
Homeಕ್ರೈಂShocking News: ತಲೆಗೆ ಪೆನ್ನು ಚುಚ್ಚಿ ಕಂದಮ್ಮ ಸಾವು

Shocking News: ತಲೆಗೆ ಪೆನ್ನು ಚುಚ್ಚಿ ಕಂದಮ್ಮ ಸಾವು

ಭದ್ರಾಚಲಂ: ಎಲ್‌ ಕೆಜಿ ಓದುತ್ತಿದ್ದ ಪುಟ್ಟ ಕಂದಮ್ಮನ ಪ್ರಾಣಕ್ಕೆ ಪೆನ್ನು ಕಂಟಕವಾಗಿದೆ. ಆಟವಾಡುತ್ತ ಜಾರಿ ಕೆಳಗೆ ಬಿದ್ದ ಮಗುವಿನ ತಲೆಗೆ ಪೆನ್ನು ಚುಚ್ಚಿಕೊಂಡ ಪರಿಣಾಮ ರಿಯಾತ್ಮಿಕಾ ಹೆಸರಿನ ಮಗು ಸಾವನ್ನಪ್ಪಿದೆ.

ಆಂದ್ರಪ್ರದೇಶದ ಭದ್ರಾಚಲಂನ ಸುಭಾಷ್ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಎಳೆಯ ವಯಸ್ಸಿನ ಮಗುವಿನ ತಲೆಗೆ ಚುಚ್ಚಿದ ಪೆನ್ನು ಆಳಕ್ಕೆ ಹೊಕ್ಕಿದ್ದು ಮೆದುಳಿನವರೆಗೆ ನುಗ್ಗಿದೆ ಎಂದು ವೈದ್ಯರು ಹೇಳಿದ್ದಾರೆ.

ಘಟನೆ ನಡೆದ ತಕ್ಷಣ ಕುಟುಂಬ ಸದಸ್ಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಪ್ರಾಥಮಿಕ ಚಿಕಿತ್ಸೆ ಬಳಿಕ ವೈದ್ಯರ ಸಲಹೆ ಮೇರೆಗೆ ಕಮ್ಮಮ್‌ ಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.

ಖಾಸಗಿ ಆಸ್ಪತ್ರೆಯಲ್ಲಿ ತಲೆಯೊಳಗೆ ಹೊಕ್ಕಿದ್ದ ಪೆನ್ನನ್ನು ತೆಗೆಯಲಾಗಿದೆ. ಇದಾದ ಬಳಿಕ ಮಗುವನ್ನು ೪೮ ಗಂಟೆಗಳ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು. ಆದರೆ, ಮಗು ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಹೆಚ್ಚಿನ ಸುದ್ದಿ