Sunday, July 7, 2024
Homeಟಾಪ್ ನ್ಯೂಸ್VIRAL NEWS: ಈ ಬೆಕ್ಕಿನ ಲಕ್‌ ನೋಡಿ..! : ಏರ್‌ಪೋರ್ಟ್‌ನಲ್ಲೇ ವಾಸ.. ಬಿಂದಾಸ್‌ ಲೈಫ್ -...

VIRAL NEWS: ಈ ಬೆಕ್ಕಿನ ಲಕ್‌ ನೋಡಿ..! : ಏರ್‌ಪೋರ್ಟ್‌ನಲ್ಲೇ ವಾಸ.. ಬಿಂದಾಸ್‌ ಲೈಫ್ – VIDEO

ಬ್ಯಾಂಕಾಕ್‌: ಬೆಕ್ಕೊಂದು (Cat) ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ (bangkok airport) ಸೆಲಿಬ್ರಿಟಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೌದು.. ಇತ್ತೀಚೆಗಷ್ಟೆ ನುರಂಗ್ ಎಂಬ ಹೆಸರಿನ 9 ತಿಂಗಳ ಕಿತ್ತಳೆ ಬಣ್ಣದ ಬೆಕ್ಕಿನ ವಿಡಿಯೋಗಳು ಟಿಕ್‌ಟಾಕ್‌ನಲ್ಲಿ ಕೆಲವು ವಿಡಿಯೋಗಳು ವೈರಲ್‌ ಆಗಿದ್ದವು. ವಿಡಿಯೋದಲ್ಲಿ ಬೆಕ್ಕು ವಿಮಾನ ನಿಲ್ದಾಣದ ಎಸ್ಕಲೇಟರ್ ಕುಳಿತು ಎಂಜಾಯ್‌ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಈ ಬೆನ್ನಲ್ಲೇ ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಒಂದು ರೀತಿಯ ಆಕರ್ಷಣೆಯಾಗಿದೆ.

ಅದೇ ರೀತಿ 31 ವರ್ಷದ ಪಾತುಮ್ ಥಾನಿ ನಿವಾಸಿ ನೋಕ್‌ಪೋರ್ನ್ ಚರೋಂಜಿಚಿಂಡಾ ಎನ್ನುವವರು ನುರಂಗ್‌ನ ಮಾಲೀಕರಾಗಿದ್ದಾರೆ. ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ನೋಕ್‌ಪೋರ್ನ್ ತನ್ನ ಗೆಳೆಯನಿಗೆ ಕೆಲಸ ಮಾಡಲು ಸಹಾಯ ಮಾಡಲು ಹೋದಾಗ, ಆಕೆ ತನ್ನ ಪ್ರೀತಿಯ ಬೆಕ್ಕನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿಂದ ವಿಮಾನ ನಿಲ್ದಾಣದಲ್ಲಿ ಆ ಬೆಕ್ಕು ಆಕರ್ಷಣೆಯಾಗಿದೆ.

ಸುವರ್ಣಭೂಮಿ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಸಾಕುಪ್ರಾಣಿಗಳು ವಿಮಾನ ನಿಲ್ದಾಣದಲ್ಲಿ ಇರುವುದನ್ನು ತಡೆಯುವ ಯಾವುದೇ ನಿಯಮಗಳಿಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ