Sunday, July 7, 2024
Homeಲೈಫ್ ಸ್ಟೈಲ್Kitchen Hacks: ಅಡುಗೆ ಮನೆಯಲ್ಲಿ ಅಂಟಿರುವ ಎಣ್ಣೆ ಜಿಡ್ಡನ್ನು ಹೀಗೆ ಸುಲಭವಾಗಿ ತೆಗೆಯಿರಿ

Kitchen Hacks: ಅಡುಗೆ ಮನೆಯಲ್ಲಿ ಅಂಟಿರುವ ಎಣ್ಣೆ ಜಿಡ್ಡನ್ನು ಹೀಗೆ ಸುಲಭವಾಗಿ ತೆಗೆಯಿರಿ

ಪ್ರತಿಯೊಂದು ಗೃಹಿಣಿಯರಿಗೂ ಅಡುಗೆ ಮಾಡುವುದಕ್ಕಿಂತ ಅಡುಗೆ ಮನೆ(Kitchen) ಯನ್ನು ಶುಚಿಗೊಳಿಸುವುದೇ ಒಂದು ದೊಡ್ಡ ಕೆಲಸ. ಯಾಕೆಂದರೆ ಆಹಾರ ಪದಾರ್ಥಗಳಲ್ಲಿ ಬಳಸಿದ ಎಣ್ಣೆಯ ಜಿಡ್ಡು ಸಂಪೂರ್ಣವಾಗಿ ಶುಚಿಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜೊತೆಗೆ ಸಾಂಬಾರು ಹಾಗೂ ಕೆಲವೊಂದು ಮಸಾಲೆ ಪದಾರ್ಥಗಳ ಕಲೆ ಅಡುಗೆ ಕೋಣೆಯಲ್ಲಿ ಹಾಗೆಯೇ ಉಳಿದು ಬಿಡುತ್ತದೆ ಇದರಿಂದ ಮನೆಗೆ ನೆಂಟರು ಬಂದಂತಹ ಸಂದರ್ಭದಲ್ಲಿ ಮುಜುಗರಕ್ಕೀಡು ಮಾಡುತ್ತದೆ. ಆದರೆ ಇನ್ನು ಮುಂದೆ ನಿಮ್ಮ ಅಡುಗೆ ಕೋಣೆಯನ್ನು ಶುಚಿಯಾಗಿರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್. ಇದರಿಂದ ನೀವೂ ಸುಲಭವಾಗಿ ಅಡುಗೆ ಕೋಣೆಯಲ್ಲಿನ ಎಣ್ಣೆ ಜಿಡ್ಡನ್ನು ಸುಲಭವಾಗಿ ತೊಡೆದುಹಾಕಬಹುದು.

ಅಡುಗೆ ಸೋಡಾ

ಅಡುಗೆ ಮಾಡಿದ ನಂತರ ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಅಡುಗೆ ಮಾಡುವಾಗ ಅಲ್ಲಲ್ಲಿ ಎಣ್ಣೆ ಮತ್ತು ಮಸಾಲೆ ಕಲೆಗಳು ಚಿಮುತ್ತಿರುತ್ತದೆ. ಅದನ್ನು ಸುಲಭವಾಗಿ ಸ್ವಚ್ಛಗೊಳಿಸಲು ಅಡಿಗೆ ಸೋಡಾವನ್ನು ಬಳಸಬೇಕು. ಅಡುಗೆ ಸೋಡಾ ಬಳಸಿ ಸ್ವಚ್ಛ ಮಾಡುವುದರಿಂದ ಅಡುಗೆ ಮನೆಯ ಟೈಲ್ಸ್ ಮತ್ತು ಸ್ಲಾಬ್ ಗಳಲ್ಲಿ ಅಂಟಿ  ಕುಳಿತಿರುವ  ಕಲೆಗಳು ಮಾಯವಾಗಿ ಬಿಡುತ್ತವೆ.

ಟೂತ್ ಪೇಸ್ಟ್

ಬಿಳಿ ಟೂತ್ ಪೇಸ್ಟ್ ಅಡುಗೆಮನೆಯ ಕೊಳೆಯನ್ನು ಸುಲಭವಾಗಿ ಶುಚಿಗೊಳಿಸಲು ಸಹಾಯ ಮಾಡುತ್ತದೆ. ಯಾವ ಜಾಗದಲ್ಲಿ ಕಲೆ, ಕೊಳೆ ಕಾಣಿಸುತ್ತದೆಯೋ ಅಲ್ಲಿ ಟೂತ್ಪೇಸ್ಟ್ ಅನ್ನು ಹಾಕಿ 5 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಆ ಜಾಗವನ್ನು ಉಜ್ಜಿ ತೊಳೆದರೆ ನಿಮ್ಮ ಅಡುಗೆ ಮನೆ ಫಳ ಫಳನೇ ಹೊಳೆಯಲು ಆರಂಭಿಸುತ್ತದೆ.

ಉಪ್ಪು ಬಳಸಿ

ಜಿಡ್ಡು, ಅಂಟಿಕೊಂಡಿರುವ ಪದಾರ್ಥಗಳನ್ನು ಕೈಯಿಂದ ಸ್ವಚ್ಛ ಮಾಡಲು ಸಾಧ್ಯವಾಗದೇ ಇರಬಹುದು. ಬಿಸಿನೀರಿನಿಂದಲೂ ಸ್ವಚ್ಛವಾಗದೇ ಇದ್ದಾಗ ಕಲ್ಲುಪ್ಪು ಬಳಸಿ ಸ್ವಚ್ಛ ಮಾಡಬಹುದು. ಸ್ವಲ್ಪ ಕಲ್ಲುಪ್ಪು ನೀರು ಸೇರಿಸಿ ನಿಧಾನಕ್ಕೆ ಉಜ್ಜಿ. ಇದರಿಂದ ಬೇಗನೆ ಸ್ವಚ್ಛವಾಗುತ್ತದೆ.

ವಿನೆಗರ್

ವಿನೆಗರ್ ತೈಲ ಕಲೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಅತ್ಯುತ್ತಮ ಆಮ್ಲವಾಗಿದೆ. ನೀರಿನಲ್ಲಿ ವಿನೆಗರ್ ಮಿಶ್ರಣ ಮಾಡುವ ಮೂಲಕ ಅಡುಗೆ ಮನೆಯ ಎಣ್ಣೆ ಜಿಡ್ಡಿನಿಂದ ಪರಿಹಾರ ಕಂಡು ಕೊಳ್ಳಬಹುದು. ನೀರಿನಲ್ಲಿ ಬೆರೆಸಿದ ವಿನೆಗರ್ ಮಿಶ್ರಣವನ್ನು ಕೊಳಕು ಅಂಟಿಕೊಂಡಿರುವ ಜಾಗಕ್ಕೆ ಸುರಿಯಬೇಕು. 5 ನಿಮಿಷಗಳ ನಂತರ ಆ ಜಾಗವನ್ನು ಉಜ್ಜಿ ತೊಳೆದರೆ ಸಂಪೂರ್ಣ ಸ್ವಚ್ಛ ಅಡುಗೆ ಮನೆ ನಿಮ್ಮದಾಗುತ್ತದೆ.

ಹೆಚ್ಚಿನ ಸುದ್ದಿ