Sunday, July 7, 2024
Homeಟಾಪ್ ನ್ಯೂಸ್BY Vijayendra: ರಾಹುಲ್‌ ಗಾಂಧಿ ನಡವಳಿಕೆ ಸಂಸತ್ತಿನ ಘನತೆಗೆ ಧಕ್ಕೆ ತಂದಿದೆ – ಬಿವೈ ವಿಜಯೇಂದ್ರ...

BY Vijayendra: ರಾಹುಲ್‌ ಗಾಂಧಿ ನಡವಳಿಕೆ ಸಂಸತ್ತಿನ ಘನತೆಗೆ ಧಕ್ಕೆ ತಂದಿದೆ – ಬಿವೈ ವಿಜಯೇಂದ್ರ ಆಕ್ರೋಶ

ಬೆಂಗಳೂರು: ವಿಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ನೀಡಿದ ಹಿಂದೂಗಳ ವಿರುದ್ಧದ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.

ಸದನದೊಳಗಿನ ರಾಹುಲ್‌ ಗಾಂಧಿ ನಡವಳಿಕೆ ಸಂಸತ್ತಿನ ಘನತೆಗೆ ಧಕ್ಕೆ ತಂದಿದೆ. ರಾಹುಲ್‌ ಗಾಂಧಿ ಲೋಕಸಭಾ ಚುನಾವಣೆ ಸಮಯದಲ್ಲಿ ಕೂಡ ಸುಳ್ಳನ್ನೇ ಹೇಳಿಕೊಡು ಬಂದಿದ್ದಾರೆ. ಇದೇ ಹಳೆ ಚಾಳಿಯನ್ನು ವಿಪಕ್ಷ ನಾಯಕನಾದ ಮೇಲೂ ಸಹ ಮುಂದುವರೆಸಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಹಿಂದೂಗಳು ಹಿಂಸಾಚಾರ ಮತ್ತು ದ್ವೇಷದಲ್ಲಿ ಹಗಲಿರುಳು ನಿರತರಾಗಿರುತ್ತಾರೆ ಎಂಬ ಹೇಳಿಕೆಯಿಂದ ಅಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ರಾಹುಲ್‌ ರಿಂದ ಹಿಂದೂಗಳಿಗೆ ತೇಜೋವದೆಯಗಿದೆ. ಅಷ್ಟೇ ಅಲ್ಲದೆ ರೈತರ ಕುರಿತು, ಅಯೋಧ್ಯೆ ಸಂಬಂಧ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.

ವಿಪಕ್ಷದ ನಾಯಕ ರಾಹುಲ್ ಗಾಂಧಿ‌ ದೇಶದ ಅಸಂಖ್ಯಾತ ಹಿಂದೂಗಳ ಕ್ಷಮೆಯನ್ನಾಚಿಸಬೇಕು. ಜವಬ್ದಾರಿ ಸ್ಥಾನದಲ್ಲಿದ್ದುಕೊಂಡು ಸುಳ್ಳು ಹೇಳುವುದು ಸರಿಯಲ್ಲ. ಈ ಹಿಂದೆ ದೇಶದಲ್ಲಿ ಪ್ರವಾಸ ಮಾಡಿ ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲವೆಂದು ಹೇಳಿದ್ದರು. ಈ ರೀತಿ ಸದನದಲ್ಲಿ ಮನಸೋ ಇಚ್ಛೆ ಮಾತನಾಡುವುದು ಖಂಡನೀಯ ಎಂದು ಬಿವೈವಿ ಆಕ್ರೋಶ ಹೊರಹಾಕಿದ್ದಾರೆ.

ಹೆಚ್ಚಿನ ಸುದ್ದಿ