Sunday, July 7, 2024
Homeಟಾಪ್ ನ್ಯೂಸ್Viral Video: ವರದಿ ಮಾಡುತ್ತಿರುವ ಸಮಯದಲ್ಲೇ ಪಾಕ್‌ ಪತ್ರಕರ್ತೆಗೆ ಗುಮ್ಮಿದ ಗೂಳಿ! VIDEO

Viral Video: ವರದಿ ಮಾಡುತ್ತಿರುವ ಸಮಯದಲ್ಲೇ ಪಾಕ್‌ ಪತ್ರಕರ್ತೆಗೆ ಗುಮ್ಮಿದ ಗೂಳಿ! VIDEO

ಪ್ರಾಣಿಗಳು ಶಾಂತವಾಗಿಯೇ ವರ್ತಿಸುತ್ತವೆ. ಆದರೆ ಅವುಗಳಿಗೆ ಕೋಪ ಬಂದರೆ ತಲೆ ಅನಾಹುತಗಳನ್ನೇ ಸೃಷ್ಟಿ ಮಾಡುತ್ತವೆ. ಇದೀಗ ಅಂತಹದೊಂದು ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಯಾವುದೋ ಒಂದು ಕಾರ್ಯಕ್ರಮದಲ್ಲಿ ಲೈವ್‌ ರಿಪೋರ್ಟಿಂಗ್‌ ಮಾಡುತ್ತಿದ್ದ ವೇಳೆ ಅತ್ತಕಡೆಯಿಂದ ಬಂದ ಗೂಳಿ ರಿಪೋರ್ಟ್‌ ಗೆ ಗುಮ್ಮಿದೆ. ಗೂಳಿ ಗುದ್ದಿದ ಏಟಿಗೆ ಪತ್ರಕರ್ತೆ ಕೆಳಗೆ ಬಿದ್ದಿದ್ದಾರೆ.

ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಜಾತ್ರೆಯೊಂದರಲ್ಲಿ ಸ್ಥಳೀಯ ವ್ಯಾಪಾರಿಗಳೊಂದಿಗೆ ಎತ್ತುಗಳ ಬೆಲೆಗಳ ಬಗ್ಗೆ ವರದಿಗಾರ್ತಿ ಚರ್ಚೆ ನಡೆಸುತ್ತಿದ್ದಳು. ಇದ್ದಕ್ಕಿದ್ದಂತೆ ಬಂದ ಗೂಳಿಯೊಂದು ವರದಿಗಾರ್ತಿಯ ಮೇಲೆ ದಾಳಿ ನಡೆಸಿದೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “ಪಾಕಿಸ್ತಾನದಲ್ಲಿ ಲೈವ್‌ ರಿಪೋರ್ಟಿಂಗ್‌ ವೇಳೆ ವರದಿಗಾರ್ತಿಗೆ ಗುದ್ದಿದ ಗೂಳಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

 

ವೈರಲ್‌ ಆಗಿರುವ ವಿಡಿಯೋದಲ್ಲಿ ಪಾಕ್‌ ವರದಿಗಾರ್ತಿ ಸ್ಥಳೀಯ ವ್ಯಾಪಾರಿಗಳ ಬಳಿ ನಿಂತು ಮಾತನಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಹೆಚ್ಚಿನ ಸುದ್ದಿ