Sunday, July 7, 2024
Homeಟಾಪ್ ನ್ಯೂಸ್ABRAHAM LINCOLN : ಹೆಚ್ಚಾದ ತಾಪಮಾನ : ಕರಗಿತು ಮಾಜಿ ಅಧ್ಯಕ್ಷನ ಸ್ಮಾರಕ 

ABRAHAM LINCOLN : ಹೆಚ್ಚಾದ ತಾಪಮಾನ : ಕರಗಿತು ಮಾಜಿ ಅಧ್ಯಕ್ಷನ ಸ್ಮಾರಕ 

ಅಮೆರಿಕ ವಾಷಿಂಗ್ಟನ್ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಪರಿಣಾಮ  ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಮೇಣದ ಪ್ರತಿಕೃತಿಯು ತೀವ್ರ ಶಾಖದಿಂದ ಕರಗುತ್ತಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ವಾಷಿಂಗ್ಟನ್ ನಲ್ಲಿ ಕಳೆದ ಮೂರು ದಿನಗಳಿಂದ ಉಷ್ಣಾಂಶ ಹೆಚ್ಚಾಗಿದ್ದು, ಲಿಂಕನ್ ಸ್ಮಾರಕದ ತಲೆ ಭಾಗ ಸಂಪೂರ್ಣ ಕರಗಿ ತಂತಿಗಳು ಮಾತ್ರ ಉಳಿದುಕೊಂಡಿದೆ. ಜೊತೆಗೆ ಸ್ಮಾರಕದ ಕಾಲು ಹಾಗೂ ಕುರ್ಚಿಗಳು ಕರಗುವ ಸ್ಥಿತಿಯಲ್ಲಿದೆ.

 ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೇಣದ ಬತ್ತಿಯ ಮೂಲಕ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಒಂದು ವರ್ಷದ ಒಳಗೆ ಅಬ್ರಹಾಂ ಲಿಂಕನ್ ಅವರ ಸ್ಮಾರಕದ ಕೆಲ ಭಾಗ ಕರಗಿ ಹೋಗಿದೆ.

 

ಹೆಚ್ಚಿನ ಸುದ್ದಿ