Sunday, July 7, 2024
Homeಕ್ರೈಂK J George: ಸಚಿವ ಜಾರ್ಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ಬಿಆರ್‌ಎಸ್ ಪಕ್ಷದ ಕಾರ್ಯಕರ್ತ...

K J George: ಸಚಿವ ಜಾರ್ಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ಬಿಆರ್‌ಎಸ್ ಪಕ್ಷದ ಕಾರ್ಯಕರ್ತ ಅರೆಸ್ಟ್

ಬೆಂಗಳೂರು : ಸಚಿವ ಕೆ.ಜೆ.ಜಾರ್ಜ್ ( K J George) ಅವರ ವಿರುದ್ಧ ಮೈಕ್ರೋ ಬ್ಲಾಗಿಂಗ್‌ ವೇದಿಕೆ ‘ಎಕ್ಸ್’ (X)ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇರೆಗೆ ತೆಲಂಗಾಣ( Telangana) ನಿವಾಸಿ ಹಾಗೂ ಬಿಆರ್‌ಎಸ್‌ (BRS) ಪಕ್ಷದ ಸಕ್ರಿಯ ಕಾರ್ಯಕರ್ತನೊಬ್ಬನನ್ನು ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ (CEN) ಠಾಣೆ ಪೊಲೀಸರು ಬಂಧಿಸಿದ್ದಾರೆ. ಭಾರತ್ ರಾಷ್ಟ್ರ ಸಮಿತಿ ಐಟಿ ಸೆಲ್ ವಿಭಾಗದ ಕಾರ್ಯಕರ್ತ, ಕರೀಂ ನಗರದ ರವಿಕಾಂತಿ ಶರ್ಮಾ ಬಂಧಿತ ಆರೋಪಿ.

ಇತ್ತೀಚಿಗೆ ಮುಗಿದ ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಸಚಿವರ ಕುರಿತು ಆರೋಪಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ. ಬಿಆರ್‌ಎಸ್ ಪಕ್ಷದ ಐಟಿ ಸೆಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರವಿಕಾಂತಿ , ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಹಾಗೂ ಗೃಹಜ್ಯೋತಿ ಯೋಜನೆ ಅನುಷ್ಠಾನದ ಕುರಿತು ಇಂಧನ ಸಚಿವರ ನಕಲಿ ಆಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದ . ಇದನ್ನು ಗಮನಿಸಿ ಕಾಂಗ್ರೆಸ್‌ ಕಾರ್ಯಕರ್ತರು ದೂರು ದಾಖಲಿಸಿದ್ದರು.

ಹೆಚ್ಚಿನ ಸುದ್ದಿ