Sunday, July 7, 2024
Homeಟಾಪ್ ನ್ಯೂಸ್Legal marijuana : ವೈಯಕ್ತಿಕ ಬಳಕೆಗೆ ಗಾಂಜಾ ಹೊಂದಿದ್ದರೆ ಅಪರಾಧವಲ್ಲ - ಸುಪ್ರೀಂ ಅಭಿಮತ!

Legal marijuana : ವೈಯಕ್ತಿಕ ಬಳಕೆಗೆ ಗಾಂಜಾ ಹೊಂದಿದ್ದರೆ ಅಪರಾಧವಲ್ಲ – ಸುಪ್ರೀಂ ಅಭಿಮತ!

ಬ್ರೆಜಿಲ್‌: ಬ್ರೆಜಿಲ್ ನ ಸರ್ವೋಚ್ಚ ನ್ಯಾಯಾಲಯವು ವೈಯಕ್ತಿಕ ಬಳಕೆಗಾಗಿ ಗಾಂಜಾ ಹೊಂದುವುದನ್ನು ಮಾನ್ಯ ಮಾಡಿ ಆದೇಶ ನೀಡಿದೆ.

ಮಂಗಳವಾರ ಈ ಬಗ್ಗೆ ಮತ ಹಾಕುವ ಪ್ರಕ್ರಿಯೆಯ ಮೂಲಕ 11 ಮಂದಿ ನ್ಯಾಯಾಧೀಶರು, ವೈಯಕ್ತಿಕ ಬಳಕೆಗಾಗಿ ನಿರ್ದಿಷ್ಟ ಪ್ರಮಾಣದ ಗಾಂಜಾ ಹೊಂದಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದು ಎಂಬ ನಿರ್ಣಯಕ್ಕೆ ಮತ ಹಾಕಿದ್ದಾರೆ.ಈ ಹಿಂದೆ ಬ್ರೆಜಿಲ್ ನಲ್ಲಿ ಗಾಂಜಾ ಸೇವನೆ ಅಪರಾಧವಾಗಿತ್ತು.

ಇನ್ನುಮುಂದೆ ನಿರ್ದಿಷ್ಟ ಪ್ರಮಾಣದ ಗಾಂಜಾ ಹೊಂದಲು ಅವಕಾಶ ನೀಡಲಾಗಿದೆ.
ಇದರ ಬಗ್ಗೆ ವಿಸ್ಕೃತವಾದ ತೀರ್ಪು ಇನ್ನಷ್ಟೇ ಬರಬೇಕಿದೆ. ಬ್ರೆಜಿಲ್ ನ ಈ ತೀರ್ಮಾನದಿಂದ ಇತರ ಗಾಂಜಾ ನಿಷೇಧವಿರುವ ದೇಶಗಳು ಕೂಡ ವೈಯಕ್ತಿಕ ಕಾರಣಕ್ಕೆ ಗಾಂಜಾ ಹೊಂದುವುದನ್ನು ಕಾನೊನು ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ನಡೆಸುತ್ತಿವೆ.

ಹೆಚ್ಚಿನ ಸುದ್ದಿ